×
Ad

ನೀರುಮಾರ್ಗ ವಲಯ ಕಾಂಗ್ರೆಸ್‌ಗೆ ಆಯ್ಕೆ

Update: 2024-02-18 18:53 IST

ಮಂಗಳೂರು, ಫೆ.18: ಗುರುಪುರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ನೀರುಮಾರ್ಗ ವಲಯ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.

ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಜಿಪಂ ಮಾಜಿ ಸದಸ್ಯ ಹಾಗೂ ಜಿಲ್ಲಾ ಕೆಡಿಪಿ ಸದಸ್ಯ ಮೆಲ್ವಿನ್ ಡಿಸೋಜ, ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ನೀರುಮಾರ್ಗ ಗ್ರಾಪಂ ಅಧ್ಯಕ್ಷ ಶ್ರೀಧರ್ ಚಿಕ್ಕಬೆಟ್ಟು, ದ.ಕ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗಿರೀಶ್ ಆಳ್ವ, ಡಿಸಿಸಿ ಸದಸ್ಯ ಜಾನ್ ಪ್ರಕಾಶ್ ಪಿಂಟೋ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಅಬ್ದುಲ್ ಅಝೀಝ್ ಭಾಷಾ, ಗುರುಪುರ ಬ್ಲಾಕ್ ಯವ ಕಾಂಗ್ರೆಸ್ ಅಧ್ಯಕ್ಷ ಮುಫೀದ್ ಅಡ್ಯಾರ್, ಮಲ್ಲೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ರಾವ್ ದೆಮ್ಮಲೆ ಮತ್ತಿತರರ ಸಮ್ಮುಖ ಆಯ್ಕೆ ಪ್ರಕ್ರಿಯೆ ನಡೆಯಿತು.

ನೂತನ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ವಾಲ್ಟರ್ ಡಿಕುನ್ಹಾ, ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಶಾಲ್ ಕುಮಾರ್ ಆಯ್ಕೆ ಯಾದರು. ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಪ್ರೀತಾ ಡಿಸೋಜ, ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಬಿತ್ತುಪಾದೆ, ಭಾಸ್ಕರ್ ಜೆ ಮಾಣೂರು, ಜೊತೆ ಕಾರ್ಯದರ್ಶಿಯಾಗಿ ಸತ್ಯಾಕ್ಷಿ, ಬ್ಲಾಕ್ ಪ್ರತಿನಿಧಿಯಾಗಿ ಸಂತೋಷ್ ಡಿಕೋಸ್ತಾ , ಲ್ಯಾನ್ಸಿ ಪಾಯಸ್, ಯಶೋಧ ಜೆ. ಸಾಲ್ಯಾನ್ , ಧನವಂತಿ ಆಯ್ಕೆಯಾದರು.

ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷರಾಗಿ ಫಾರೂಕ್ ಬಿತ್ತುಪಾದೆ, ಮೆಲ್ವಿನ್ ಸಲ್ಡಾನ, ಜೊತೆ ಕಾರ್ಯದರ್ಶಿಯಾಗಿ ಮೀನಾ ಡಿಸೋಜ, ಬ್ಲಾಕ್ ಪ್ರತಿನಿಧಿಯಾಗಿ ಕೀರ್ತಿರಾಜ್ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News