×
Ad

ಒಡಿಯೂರಿನಲ್ಲಿ 'ಸಿರಿರಾಮೆ' ತುಳು ಸಾಹಿತ್ಯ ಸಮ್ಮೇಳನ

Update: 2024-02-18 20:04 IST

ವಿಟ್ಲ: ಸನಾತನ ಹಿಂದೂಧರ್ಮಕ್ಕೆ ಇನ್ನೊಂದು ಹೆಸರು ಅಶ್ವತ. ತ್ಯಾಗ ಮತ್ತು ಸೇವೆ ರಾಷ್ಟ್ರೀಯ ಆದರ್ಶ. ಸೇವೆಗೆ ಇನ್ನೊಂದು ಹೆಸರು ಹನುಮಂತ. ತ್ಯಾಗ ಪೂರ್ಣ ಸೇವೆ ನಮ್ಮದಾಗಬೇಕು. ರಾಮಾಯಣ ಬದುಕಿನ ಬೆಳಕು. ರಾಮಾಯಣ ನಮ್ಮ ಜೀವನದ ದಾರಿದೀವಿಗೆಯಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ತಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಬಂಟ್ವಾಳ ತಾಲೂಕಿನ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತುಳುನಾಡ ಜಾತ್ರೆ - ಶ್ರೀ ಒಡಿಯೂರು ರಥೋತ್ಸವದ ಪ್ರಥಮ ದಿನವಾದ ರವಿವಾರ ಸಂಸ್ಥಾನದ ಆತ್ರೆಯ ಮಂಟಪದಲ್ಲಿ ನಡೆದ ಇಪ್ಪತ್ತನಾಲ್ಕನೇ 'ಸಿರಿರಾಮೆ' ತುಳು ಸಾಹಿತ್ಯ ಸಮ್ಮೇಳನ ವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಮಧ್ವ ನವಮಿಯ ಶುಭ ಸಂದರ್ಭದಲ್ಲಿ ನಾವಿಲ್ಲಿ ಸೇರಿದ್ದೇವೆ. ಆನಂದದ ಸೆಲೆ ರಾಮನ ಆದರ್ಶದಲ್ಲಿದೆ. ರಾಮನ ಬದುಕೆ ಆನಂದ. ಆತ್ಮ ರಾಮನ ಬಗೆಗಿನ ತಿಳುವಳಿಕೆ ಅಗತ್ಯ. ವಿಶ್ವವೇ ರಾಮಮಯವಾಗಿರುವ ಹಿನ್ನೆಲೆಯಲ್ಲಿ 'ಸಿರಿರಾಮೆ' ಎನ್ನುವ ಹೆಸರನ್ನು ಈ ಭಾರಿಯ ತುಳು ಸಾಹಿತ್ಯ ಸಮ್ಮೇಳನ ಇಡಲಾಗಿದೆ ಎಂದರು.

ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಪ್ರಧಾನ ಸಂಚಾಲಕರಾದ ಡಾ.ವಸಂತಕುಮಾರ್ ಪೆರ್ಲರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಪ್ರತಿ ವರ್ಷ ಒಂದಲ್ಲ ಒಂದು ವಿಚಾರವನ್ನು ಇಟ್ಟುಕೊಂಡು ತುಳು ಭಾಷೆಯನ್ನು ಬೆಳೆಸುವ ಕೆಲಸ ತುಳು ಸಾಹಿತ್ಯ ಸಮ್ಮೇಳನದ ಮುಖಾಂತರ ಸಂಸ್ಥಾನದಿಂದ ಆಗುತ್ತಿದೆ. ಜಾನಪದ ಉಳಿದರೆ ಸಂಸ್ಲೃತಿ ಉಳಿಯು ತ್ತದೆ ಎನ್ನುವ ದೂರದೃಷ್ಠಿಯನ್ನು ಇಟ್ಟುಕೊಂಡು ಶ್ರೀಗಳು ಸಾಹಿತ್ಯ ಸಮ್ಮೇಳನವನ್ನು ನಡೆಸುತ್ತಾ ಬರುತ್ತಿದ್ದಾರೆ ಎಂದರು.

ಯಕ್ಷಗಾನ ಕಲಾವಿದರು, ಸಾಹಿತಿ, ತಜ್ಞ ವೈದ್ಯರಾಗಿರುವ ಡಾ| ಭಾಸ್ಕರಾನಂದ ಕಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ದರು. ವಗೆನಾಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮುಗುಳಿ ತಿರುಮಲೇಶ್ವರ ಭಟ್,ಕನ್ಯಾನ ಶ್ರೀ ದತ್ತಕೃಪಾ ಪೈನಾನ್ಸ್ ಕಾರ್ಪೋರೇಶನ್ ನ ಮಾಲಕರಾದ ಶ್ರೀಧರ ಕೆ.ಶೆಟ್ಟಿ ಗುಬ್ಯ ಮೇಗಿನಗುತ್ತು, ಶ್ರೀ ಒಡಿಯೂರು ರಥೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಶ್ರೀ ಒಡಿಯೂರು ರಥೋತ್ಸವ ಸಮಿತಿ ಕೋಶಾಧಿಕಾರಿ ಎ.ಸುರೇಶ್ ರೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭ ಶ್ರೀ ಗುರುದೇವಾನಂದ ಸ್ವಾಮೀಜಿಯವರು ತುಳು ಲಿಪಿ ಕೈಬರಹವನ್ನು ಒಳಗೊಂಡ ' ಆಧ್ಯಾತ್ಮ ರಾಮಾಯ ಣಾಂತರ್ಗತೊ ಸುಂದರಕಾಂಡ' ಹಾಗೂ ಡಾ. ವಸಂತಕುಮಾರ್ ಪೆರ್ಲ ರವರು ಬರೆದ 'ತೂಪರಿಕೆ' ಪುಸ್ತಕ ಬಿಡುಗಡೆಗೊಂಡಿತು.

ರೇಣುಕಾ ಎಸ್. ರೈ ಪ್ರಾರ್ಥಿಸಿದರು. ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಪ್ರಧಾನ ಸಂಚಾಲಕರಾದ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಸಮಿತಿ ಸಂಚಾಲಕರಾದ ಪಿ.ಲಿಂಗಪ್ಪ ಗೌಡ ಪನೆಯಡ್ಕ ವಂದಿಸಿದರು.

ತುಳು ಸಾಹಿತ್ಯ ಸಮ್ಮೇಳನದಲ್ಲಿ ರಾಮಾಯಣೊಡು ದೆಂಗ್ ನ ಮಾನವೀಯ ಮೌಲ್ಯ ಹಾಗೂ ಜಾನಪದ ಪಿಂದರಿಕೆಡ್ ರಾಮಾಯಣೊ ವಿಷಯದಲ್ಲಿ ಮಂಥನ ನಡೆಯಿತು. ವಿವೇಕಾನಂದ ಕಾಲೇಜು ಸಂಸ್ಕೃತ ವಿಭಾಗ ಮುಖ್ಯಸ್ಥ ಶ್ರೀಶ ಕುಮಾರ್ ಎಂ. ಕೆ., ದೈವನರ್ತಕ ಡಾ. ರವೀಶ್ ಪಡುಮಲೆ ಮಾತನಾಡಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ತಜ್ಞ ವೈದ್ಯ ಡಾ. ಭಾಸ್ಕರಾನಂದ ಕುಮಾರ್ ಕಟೀಲು ವಹಿಸಿದ್ದರು. ತುಳು ಸಾಹಿತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ವಸಂತಕುಮಾರ್ ಪೆರ್ಲ ಉಪಸ್ಥಿತರಿದ್ದರು.

ಶೇಖರ್ ಶೆಟ್ಟಿ ಬಾಯಾರು ಸ್ವಾಗತಿಸಿದರು. ಲೀಲಾ ಪಾದೆಕಲ್ಲು ವಂದಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ತಜ್ಞ ವೈದ್ಯ ಡಾ. ಭಾಸ್ಕರಾನಂದ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ಕಬಿತೆ-ಪದ-ಚಿತ್ರೊ ಕಾರ್ಯಕ್ರಮ ನಡೆಯಿತು.

ಕವಿಗಳಾದ ವಸಂತಿ ಎ. ವಿಟ್ಲ, ರಾಜಶ್ರೀ ಟಿ. ರೈ ಪೆರ್ಲ, ವಿಜಯಾ ಶೆಟ್ಟಿ ಸಾಲೆತ್ತೂರು, ಟಿ. ಸುಬ್ರಹ್ಮಣ್ಯ ಒಡಿಯೂರು ಕವಿತೆ ಹೇಳಿದರು. ಹಿರಿಯ ಕಲಾವಿ ಗಣೇಶ ಸೋಮಾಯಾಜಿ ಬಿ., ಕಲಾವಿದೆ ಜಯಶ್ರೀ ಶರ್ಮ ಚಿತ್ರ ಬಿಡಿಸಿದರು. ಹಿರಿಯ ಕಲಾವಿದ ಪ್ರೊ. ಅನಂತಪದ್ಮನಾಭ ರಾವ್ ಸಹಕಾರಿಸಿದರು. ರವಿರಾಜ್ ಶೆಟ್ಟಿ ಒಡಿಯೂರು ರಾಗ ಸಂಯೋಜನೆಯಲ್ಲಿ ಜೈ ಗುರುದೇವ್ ಕಲಾಕೇಂದ್ರದವರು ಹಾಡಿದರು.

ಸ್ವಯಂಸೇವಕ ಸಮಿತಿಯ ಸಂಚಾಲಕ ಯಶೋಧರ ಸಾಲ್ಯಾನ್ ಸ್ವಾಗತಿಸಿದರು. ಗ್ರಾಮ ವಿಕಾಸ ಯೋಜನೆಯ ಮೇಲ್ವಿಚಾರಕಿ ಕಾವ್ಯಲಕ್ಷ್ಮೀ ವಂದಿಸಿದರು. ಡಾ. ವಸಂತ ಕುಮಾರ್ ಪೆರ್ಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News