×
Ad

ಕೀರ್ತನಾ ಬಿ. ಚಿಗಟೇರಿಗೆ ಡಾಕ್ಟರೇಟ್ ಪದವಿ

Update: 2024-02-18 20:54 IST

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕೀರ್ತನಾ ಬಿ. ಚಿಗಟೇರಿ ಅವರು 'ನಾನ್-ಬೈಪೋಲಾರ್ ಎಸೆಸ್ಮೆಂಟ್ ಆಫ್ ಮಲ್ಟಿ-ಮೊಡಲ್ ಇನ್ಪುಟ್ಸ್ ಫಾರ್ ಒಪೀನಿಯನ್ ಎನಾಲಿಸಿಸ್' ಎಂಬ ವಿಷಯದ ಬಗೆಗೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿಯನ್ನು ನೀಡಿದೆ.

ಇವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ಉಪಕುಲ ಸಚಿವೆ ಡಾ| ರೇಖಾ ಭಂಡಾರ್ಕರ್ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News