ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ
Update: 2024-02-18 21:00 IST
ಸುಳ್ಯ: ಕೊಡಗು ಸಂಪಾಜೆಯ ಬೈಲಿನ ಕನ್ಯಾನ ಎಂಬಲ್ಲಿ ಫೆ.8 ರಂದು ಕನ್ಯಾನ ವಿಜಯ್ ಕುಮಾರ್ ಎಂಬವರ ಮನೆಯಿಂದ ಚಿನ್ನಾಭರಣವನ್ನು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಡಗು ಜಿಲ್ಲೆಯ ಬಲಮುರಿ ನಿವಾಸಿ ಸುದೀಪ್ ಟಿ.ಎಸ್. (23), ಎಂ ಬಾಡಗ ನಿವಾಸಿ ನಿಶಾಂತ್ ಎಂ.ಎಂ. (27) ಹಾಗೂ ನಾಪೊಕ್ಲು ಹಳೆ ತಾಲೂಕು ನಿವಾಸಿ ಇಬ್ರಾಹಿಂ (29) ಬಂಧಿತ ಆರೋಪಿಗಳು.
ಕನ್ಯಾನ ವಿಜಯ್ ಕುಮಾರ್ ಫೆ.8 ರಂದು ಕೆಲಸದ ನಿಮಿತ್ತ ಬೇರೆಡೆಗೆ ತೆರಳಿದ್ದ ಸಂದರ್ಭ ಮನೆಯಲ್ಲಿ ಯಾರು ಇಲ್ಲದಿರುವಾಗ ಮನೆಯ ಬಾಗಿಲ ಬೀಗವನ್ನು ಮುರಿದು ಕಪಾಟಿನಲ್ಲಿದ್ದ ಅಂದಾಜು 47 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ರೂ. 20 ಸಾವಿರ ನಗದನ್ನು ಕಳವು ಮಾಡಿದ್ದರು. ಈ ಬಗ್ಗೆ ಮಡಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.