×
Ad

ಫಾದರ್ ಮುಲ್ಲರ್ ಬಿಎಚ್‌ಎಮ್‌ಎಸ್ ಸ್ನಾತಕೋತ್ತರ ಕೋರ್ಸ್ ಉದ್ಘಾಟನೆ

Update: 2024-02-19 21:12 IST

ಮಂಗಳೂರು: ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ 39ನೇ ಬ್ಯಾಚ್ ಬಿಎಚ್‌ಎಮ್‌ಎಸ್ ಪದವಿ ಕೋರ್ಸ್ ಹಾಗೂ 26ನೇ ಬ್ಯಾಚ್ ಸ್ನಾತಕೋತ್ತರ ಕೋರ್ಸ್‌ನ ಉದ್ಘಾಟನೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ಡಾ. ಪ್ರವೀಣ್ ರಾಜ್ ಅವರು ಈ ಕಾಲೇಜು ಭಾರತದಲ್ಲಿರುವ ಅತ್ಯುತ್ತಮ ಹೋಮಿಯೋಪಥಿ ಕಾಲೇಜುಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. ಇಲ್ಲಿ ಅಧ್ಯಯನಕ್ಕೆ ಒಳ್ಳೆಯ ಅವಕಾಶ ಇದೆ ಎಂದು ಶ್ಲಾಘಿಸಿದರು.

ಹೋಮಿಯೋಪಥಿ ವಿಶ್ವದಲ್ಲಿ ಎರಡನೇಯ ಅತೀದೊಡ್ಡ ವೈದ್ಯಕೀಯ ಪದ್ಧತಿಯಾಗಿದೆ ಎಂದು ತಿಳಿಯಪಡಿಸಿದರು.

ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ. ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಾಯಕ ಉಪ ಆಡಳಿತಾಧಿ ಕಾರಿ ವಂ. ಅಶ್ವಿನ್ ಕ್ರಾಸ್ತಾ, ವೈದ್ಯಕೀಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಗಿರೀಶ್ ನಾವಡ ಯು.ಕೆ, ಯು.ಜಿ. ಶೈಕ್ಷಣಿಕ ಉಸ್ತುವಾರಿ ಡಾ. ಅಮಿತಾ ಬಾಳಿಗ, ಪಿ.ಜಿ. ಶೈಕ್ಷಣಿಕ ಉಸ್ತುವಾರಿ ಡಾ. ಜೋಶ್ನಾ ಶಿವಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಇ.ಎಸ್.ಜೆ ಪ್ರಭು ಕಿರಣ್ ಸ್ವಾಗತಿಸಿದರು. ಆಡಳಿತಾಧಿಕಾರಿ ವಂ. ರೋಶನ್ ಕ್ರಾಸ್ತಾ, ಉಪ ಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿ’ಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News