ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಪರೀಕ್ಷೆ: ಶ್ರೀದೇವಿ ಕಾಲೇಜಿಗೆ ರ‍್ಯಾಂಕ್
Update: 2024-02-20 20:55 IST
ಮಂಗಳೂರು, ಫೆ.20: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು 2023 ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಶ್ರೀ ದೇವಿ ಕಾಲೇಜ್ ಆಫ್ ನರ್ಸಿಂಗ್‌ನ 7 ಮಂದಿ ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದಾರೆ.
ಮ್ಯಾನೇಜ್ಮೆಂಟ್ ಅಫ್ ನರ್ಸಿಂಗ್ ಸರ್ವಿಸಸ್ ಆ್ಯಂಡ್ ಎಜುಕೇಶನ್ ವಿಭಾಗದಲ್ಲಿ ರೋಶ್ನಿ ಸಿ. ಥೋಮಸ್ 5ನೇ ರ‍್ಯಾಂಕ್ , ಸೈಕೋಲಾಜಿ ವಿಭಾಗದಲ್ಲಿ ರಮ್ಯಶ್ರೀ ಮತ್ತು ವೈಶ್ಣವಿ ವಿ, 7ನೇ ರ‍್ಯಾಂಕ್ ಮೆಡಿಕಲ್ ಸರ್ಜಿಕಲ್ ನರ್ಸಿಂಗ್-2 ವಿಭಾಗದಲ್ಲಿ ಅಕ್ಷರ ಶಾಜಿ 9ನೇ ರ‍್ಯಾಂಕ್, ಸೋಸಿಯೋಲಜಿ ವಿಭಾಗದಲ್ಲಿ ಮುಹಮ್ಮದ್ ಮಿದ್ಲಾಜ್ 9ನೇ ರ‍್ಯಾಂಕ್, ನ್ಯೂಟ್ರಿಶನ್ ಆ್ಯಂಡ್ ಬೈಯೋಕೆಮೆಸ್ಟ್ರಿ ವಿಭಾಗದಲ್ಲಿ ಡೋನ ಬಿಜು 10ನೇ ರ‍್ಯಾಂಕ್ ಹಾಗೂ ನರ್ಸಿಂಗ್ ರಿಸೆರ್ಚ್ ಆ್ಯಂಡ್ ಸ್ಟಾಟಿಸ್ಟಿಕ್ಸ್ ವಿಭಾಗದಲ್ಲಿ ಅನಿಟ್ಟ ಟೋಮಿ 10ನೇ ರ‍್ಯಾಂಕ್ ಪಡೆದುಕೊಂಡಿರುವುದಾಗಿ ಪ್ರಕಟನೆ ತಿಳಿಸಿದೆ.