×
Ad

ವೀರರಾಣಿ ಅಬ್ಬಕ್ಕ ಉತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Update: 2024-02-21 16:47 IST

ಉಳ್ಳಾಲ: ಫೆ.24ರಂದು ಉಳ್ಳಾಲ ನಗರಸಭೆಯ ಅಧೀನದಲ್ಲಿರುವ ಮಹಾತ್ಮಗಾಂಧಿ ರಂಗಮಂದಿರದಲ್ಲಿ ನಡೆಯಲಿರುವ 2023-24ರ ವೀರರಾಣಿ ಅಬ್ಬಕ್ಕ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಮಾಜಿ ಶಾಸಕರು ಹಾಗೂ ಸಮಿತಿಯ ಸ್ವಾಗತಾ ಧ್ಯಕ್ಷ ಕೆ.ಜಯರಾಮ ಶೆಟ್ಟಿಯವರು ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಅವರು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸದಸ್ಯರು ಊರಿನ ಸಂಘಸಂಸ್ಥೆ, ಮಹಿಳಾ ಒಕ್ಕೂಟ ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಿ ಉಳ್ಳಾಲದ ರಾಣಿ ಅಬ್ಬಕ್ಕ ಉತ್ಸವವನ್ನು ಅದ್ದೂರಿಯಾಗಿ “ನಾಡಹಬ್ಬ” ವಾಗಿ ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.

ಈ ಕಾರ್ಯಕ್ರಮದಲ್ಲಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್, ಸಮಿತಿಯ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಪ್ರಧಾನ ಕಾರ್ಯದರ್ಶಿ ಧನಲಕ್ಷಿ್ಮ ಗಟ್ಟಿ, ಕೋಶಾಧಿಕಾರಿ ಆನಂದ ಕೆ ಅಸೈಗೋಳಿ, ಉಪಾಧ್ಯಕ್ಷರಾದ ಯು.ಪಿ.ಆಲಿಯಬ್ಬ, ದೇವಕಿ ಆರ್ ಉಳ್ಳಾಲ್, ಪದಾಧಿಕಾರಿಗಳಾದ ಡಿ.ಎನ್.ರಾಘುವ, ಸತೀಶ್ ಭಂಡಾರಿ, ರತ್ನಾವತಿ ಜೆ ಬೈಕಾಡಿ, ಶಶಿಕಲಾ ಗಟ್ಟಿ, ಮಾಧವಿ ಉಳ್ಳಾಲ್, ಶಶಿಕಾಂತಿ ಉಳ್ಳಾಲ್, ಸತ್ಯವತಿ, ಸ್ವಪ್ನ ಶೆಟ್ಟಿ, ಮಲ್ಲಿಕಾ ಉಳ್ಳಾಲ್‌ಬೈಲ್, ಸ್ವಪ್ನಾ ಹರೀಶ್ ರೇಖಾ, ಶರ್ಮಿಳಾ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News