ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ. ಜಿಲ್ಲಾ ಸಮಿತಿ ಮಹಾಸಭೆ
ಅಬ್ದುರ‌್ರಹ್ಮಾನ್
ಮಂಗಳೂರು: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ.ಜಿಲ್ಲಾ ನೂತನ ಸಮಿತಿಯ ಮಹಾಸಭೆಯು ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಚೇರಿಯಲ್ಲಿ ನಡೆಯಿತು.
ಚುನಾವಣಾಧಿಕಾರಿಯಾಗಿ ಕರ್ನಾಟಕ ರಾಜ್ಯ ಉಸ್ತುವಾರಿ ಟಿ.ಪಿ ಅಶ್ರಫ್ ಅಲೀ ಸಾಹೇಬ್ ಭಾಗವಹಿಸಿದ್ದರು.
ಮುಸ್ಲಿಂ ಲೀಗ್‌ನ ದ.ಕ.ಜಿಲ್ಲಾ ನೂತನ ಅಧ್ಯಕ್ಷರಾಗಿ ಸಿ. ಅಬ್ದುರ‌್ರಹ್ಮಾನ್ ಮಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ನೌಶಾದ್ ಮಲಾರ್, ಕೋಶಾಧಿಕಾರಿಯಾಗಿ ರಿಯಾಝ್ ಹರೇಕಳ, ಉಪಾಧ್ಯಕ್ಷರಾಗಿ ಎ.ಎಸ್.ಇ ಇಬ್ರಾಹೀಂ ಕರೀಮ್ ಕಡಬ, ಖಾದರ್ ಮಾಸ್ಟರ್ ಬಂಟ್ವಾಳ, ಸಯ್ಯದ್ ಪಿ.ಕೆ, ಇಸ್ಮಾಯೀಲ್ ಬಂದರ್, ಶಬೀರ್ ಅಝ್ಹರಿ ಪಾಂಡವರಕಲ್ಲು, ಜತೆ ಕಾರ್ಯದರ್ಶಿಯಾಗಿ ಸಿದ್ಧೀಕ್ ಕಡಬ, ರಿಯಾಝ್ ಫೈಝಿ ಪಟ್ಟೆ ಸವಣೂರು, ಬಶೀರ್ ಉಳ್ಳಾಲ, ಇಸ್ಮಾಯೀಲ್ ಅರಬಿ ಬಂಟ್ವಾಳ ಆಯ್ಕೆಗೊಂಡರು.
ಮುಸ್ಲಿಂ ಯೂತ್ ಲೀಗ್ ಕನ್ವೀನರ್‌ರಾಗಿ ಅನೀಸ್ ತೋಡಾರು, ಎಂಎಸ್‌ಎಫ್ ಕನ್ವೀನರಾಗಿ ನಿಸಾರ್ ಅಹ್ಮದ್ ಬೆಂಗರೆ ಹಾಗೂ ಮೀಡಿಯಾ ವಿಂಗ್ ಕನ್ವೀನರ್‌ರಾಗಿ ಮುಸ್ತಫಾ ರೆಂಜಲಾಡಿ ಆಯ್ಕೆಯಾದರು.