×
Ad

ಟಿಪ್ಪುಸುಲ್ತಾನ್ ಕಟೌಟ್ ತೆರವಿಗೆ ಸೂಚನೆ : ಮುಸ್ಲಿಂ ಲೀಗ್ ಆಕ್ಷೇಪ

Update: 2024-02-21 19:35 IST

ಮಂಗಳೂರು: ಡಿವೈಎಫ್‌ಐ ರಾಜ್ಯ ಸಮ್ಮೇಳನದ ಪ್ರಯುಕ್ತ ಹರೇಕಳದಲ್ಲಿ ಅಳವಡಿಸಲಾದ ಟಿಪ್ಪುಸುಲ್ತಾನ್‌ರ ಕಟೌಟ್‌ನ್ನು ತೆರವುಗೊಳಿಸಲು ಕೊಣಾಜೆ ಪೊಲೀಸ್ ಠಾಣಾಧಿಕಾರಿ ನೀಡಿರುವ ಸೂಚನೆಗೆ ಮುಸ್ಲಿಂ ಲೀಗ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಥಮ ಸ್ವಾತಂತ್ರ್ಯ ಹೋರಾಟದ ಸೇನಾನಿಯಾಗಿ ಪರಕೀಯರ ಆಡಳಿತದ ವಿರುದ್ಧ ಹೋರಾಡಿ ಧೀರ ಮರಣವನ್ನಪ್ಪಿದ್ದ ಮತ್ತು ತನ್ನ ಪುತ್ರರನ್ನೂ ತ್ಯಾಗ ಮಾಡಿದ ಸುಲ್ತಾನ್‌ರ ಹೋರಾಟಕ್ಕೆ ಬ್ರಿಟೀಷರೇ ದಂಗಾಗಿ ಮೈಸೂರಿನ ಹುಲಿ ಎಂದು ಬಿರುದನ್ನು ನೀಡಿದ್ದರು. ಹೀಗಿರುವಾಗ ಟಿಪ್ಪು ಸುಲ್ತಾನರ ಕಟೌಟನ್ನು ತೆರವುಗೊಳಿಸಲು ಸೂಚಿಸಿರುವುದು ಖಂಡನೀಯ ಎಂದು ದ.ಕ. ಜಿಲ್ಲಾ ಮುಸ್ಲಿಂ ಲೀಗ್ ಪದಾಧಿಕಾರಿಗಳಾದ ಮುಹಮ್ಮದ್ ಇಸ್ಮಾಯೀಲ್ ಹಾಗೂ ರಿಯಾಝ್ ಹರೇಕಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News