ಯೆನೆಪೊಯ ಡೆಂಟಲ್ ಕಾಲೇಜಿನ ಫೋರೆನ್ಸಿಕ್ ಒಡಾಂಟಾಲಜಿ ಕೇಂದ್ರದಲ್ಲಿ ಅಲ್ಪಾವಧಿಯ ಕೋರ್ಸ್
ಮಂಗಳೂರು: ಯೆನೆಪೊಯ ಡೆಂಟಲ್ ಕಾಲೇಜ್‌ನ ಸೆಂಟರ್ ಫಾರ್ ಫೋರೆನ್ಸಿಕ್ ಒಡಾಂಟಾಲಜಿಯಲ್ಲಿ ಮೌಲ್ಯಾಧಾರಿತ ಅಲ್ಪಾವಧಿಯ ಕೋರ್ಸ್ ಆರಂಭಗೊಂಡಿತು.
ಯೆನೆಪೊಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ಗಂಗಾಧರ ಸೋಮಯಾಜಿ ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು.
ಕ್ರಾನಿಯೋಫೇಶಿಯಲ್ ಎನಾಲೀಸ್ ಕೇಂದ್ರದ ನಿರ್ದೇಶಕ ಡಾ.ಅಖ್ತರ್ ಹುಸೇನ್, ಯೆನೆಪೊಯ ದಂತ ವೈದ್ಯಕೀಯ ಕಾಲೇಜಿನ ಡೆಂಟಿಸ್ಟ್ರಿ ವಿಭಾಗದ ಡೀನ್ ಡಾ.ಶ್ಯಾಮ್ ಎಸ್ ಭಟ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಲಕ್ಷ್ಮೀಕಾಂತ್ ಚಾತ್ರ ವಹಿಸಿದ್ದರು. ಅವರು ಫೋರೆನ್ಸಿಕ್ ಅಡಾಂಟಾಲಜಿಯ ವಿವಿಧ ಕ್ಷೇತ್ರಗಳ ಬಗ್ಗೆ ವಿವರಿಸಿದರು.
ಕೇಂದ್ರದ ಮುಖ್ಯಸ್ಥ ಡಾ.ಸುದೀಂದ್ರ ಪ್ರಭು ಅವರು ದೇಶಾದ್ಯಂತ ಕೆಲವು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಮಾತ್ರ ಇರುವ ಇಂತಹ ವಿಶೇಷ ಘಟಕದ ಬಗ್ಗೆ ಪ್ರಸ್ತಾಪಿಸಿದರು. ಕೇಂದ್ರದ ಉಪನ್ಯಾಸಕರಾದ ಡಾ.ಸೈಯದ್ ಮೊಹಮ್ಮದ್ ಮಿಕ್ದಾದ್ ಮತ್ತು ಡಾ.ಉಮ್ಮೆ ಅಮಾರ ವಂದಿಸಿದರು. ಡಾ.ಶೇಖ್ ಸದಾಫ್ ಕಾರ್ಯಕ್ರಮ ನಿರೂಪಿಸಿದರು.