ರಾಜ್ಯದ ಕೈಗಾರಿಕಾ ಬೆಳವಣಿಗೆಯ ದೃಷ್ಟಿಯಿಂದ ಮಂಗಳೂರು ಬಂದರು ಪ್ರಮುಖ ಕೇಂದ್ರ: ವಿಜಯ ಕೃಷ್ಣನ್
ಮಂಗಳೂರು: ಮಂಗಳೂರು ಬಂದರು ಕರ್ನಾಟಕದ ಉದ್ಯಮ ಕ್ಷೇತ್ರದ ಬೆಳವಣಿಗೆಯ ದೃಷ್ಟಿಯಿಂದ ಪ್ರಮುಖ ಕೇಂದ್ರ ವಾಗಿದೆ. ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಪೂರಕವಾದ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಇನ್ನಷ್ಟು ಅಭಿವೃದ್ಧಿ ಯೋಜನೆಗಳ ಜೋಡಣೆಯಾಗಬೇಕಾಗಿದೆ ಎಂದು ಭಾರತೀಯ ಕೈಗಾರಿಕೆಗಳ ಒಕ್ಕೂಟದ ಕರ್ನಾಟಕ ಘಟಕದ ಅಧ್ಯಕ್ಷ ವಿಜಯ ಕೃಷ್ಣ ನ್ ವೆಂಕಟೇಸನ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಅವರು ಇಂದು ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಭಾರತೀಯ ಕೈಗಾರಿಕೆಗಳ ಒಕ್ಕೂಟದ ಕರ್ನಾಟಕ ಘಟಕದ ಸಮಾವೇಶದ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಕರ್ನಾಟಕ ರಾಜ್ಯದ ದೃಷ್ಟಿಯಿಂದ ಗಮನಿಸಿದರೆ ಮಂಗಳೂರು ಬಂದರು ರಾಜ್ಯದ ಅತ್ಯಂತ ಮುಖ್ಯ ಕೇಂದ್ರ ವಾಗಿದೆ.ಈ ಕೇಂದ್ರದ ಮೂಲಕ ಆಮದು ರಫ್ತು ಚಟುವಟಿಕೆಗಳು ವೃದ್ಧಿ ಯಾದಷ್ಟು ಕೈಗಾರಿಕಾ ಬೆಳವಣಿಗೆ ಯಾಗಲಿದೆ ಎಂದು ವಿಜಯ ಕೃಷ್ಣ ವೆಂಕಟೇಸನ್ ತಿಳಿಸಿದ್ದಾರೆ.
ಭವಿಷ್ಯದ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ.ಮುಂದಿನ ಹಂತದಲ್ಲಿ ಕೃತಕ ಬುದ್ಧಿಮತ್ತೆ ಉದ್ಯೋಗ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸಲಿದೆ.ಇದಕ್ಕೆ ಪೂರಕವಾದ ಕೌಶಲ್ಯವನ್ನು ಮುಂದಿನ ಉದ್ಯೋಗಾ ಕಾಂಕ್ಷಿಗಳು ಮೈ ಗೂಡಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮಂಗಳೂರಿನ ಭಾರತೀಯ ಕೈಗಾರಿಕೆಗಳ ಒಕ್ಕೂಟದ ಸಮಾವೇಶದಲ್ಲಿ ಗೋಷ್ಠಿ ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಜಯ ಕೃಷ್ಣ ವೆಂಕಟೇಸನ್ ತಿಳಿಸಿದ್ದಾರೆ.
ಮಂಗಳೂರು -ಬೆಂಗಳೂರು ನಡುವಿನ ರಸ್ತೆ ಸಂಪರ್ಕ ದ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ. ಈ ಯೋಜನೆಗಳ ಬಗ್ಗೆ ಖಚಿತವಾದ ಮಾಹಿತಿ ದೊರೆತ ಬಳಿಕ ಈ ಬಗ್ಗೆ ನಮ್ಮ ಸಂಸ್ಥೆ ಕೈಗಾರಿಕಾ ಅಭಿವೃದ್ಧಿ ಗೆ ಪೂರಕವಾದ ಸಲಹೆ ಸೂಚನೆಗಳನ್ನು ನೀಡುತ್ತದೆ.ದೇಶದ ವಿವಿಧ ಕಡೆಗಳಲ್ಲಿ ಕೈಗಾರಿಕಾ ಬೆಳವಣಿಗೆಗೆ ಪೂರಕವಾದ ಸಲಹೆ ಸೂಚನೆಗಳನ್ನು ಭಾರತೀಯ ಕೈಗಾರಿಕೆಗಳ ಒಕ್ಕೂಟ ನೀಡುತ್ತಾ ಬಂದಿದೆ ಎಂದು ಅವರು ತಿಳಿಸಿದ್ದಾರೆ.