×
Ad

ವೇಣೂರು ಬಾಹುಬಲಿ ಮಸ್ತಕಾಭಿಷೇಕ: ವಾಹನ ಸಂಚಾರ ಮಾರ್ಗ ಬದಲಾವಣೆ

Update: 2024-02-23 20:16 IST

ಫೈಲ್‌ ಫೋಟೊ 

ಮಂಗಳೂರು: ವೇಣೂರು ಭಗವಾನ್ ಶ್ರೀ ಬಾಹುಬಲಿ ಮಸ್ತಕಾಭಿಷೇಕದ ಮಹೋತ್ಸವ -2024 ಆರಂಭಗೊಂಡಿದ್ದು, ಜನ ಸಂದಣಿಯಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ.

ಹಾಗಾಗಿ ಮಾರ್ಚ್1ರವೆರೆಗೆ ಮೂಡುಬಿದಿರೆ ಕಡೆಯಿಂದ ಬಂದು ವೇಣೂರು ಮೇಲಿನ ಪೇಟೆಯ ಮೂಲಕ ಬೆಳ್ತಂಗಡಿ ಸಂಪರ್ಕಿಸುವ ಲಘು ವಾಹನಗಳು ಪಡ್ಯಾರಬೆಟ್ಟು, ಹೊಕ್ಕಾಡಿಗೋಳಿ, ಕೂಡುರಸ್ತೆ, ಬಜಿರೆ, ಮುದ್ದಾಡಿ, ನೈನಾಡು ಮೂಲಕ ಗೋಳಿಯಂಗಡಿ ಆಗಿ ಬೆಳ್ತಂಗಡಿ ರಸ್ತೆಗೆ ಸಂಪರ್ಕಿಸಬೇಕು.

ಬೆಳ್ತಂಗಡಿ ಕಡೆಯಿಂದ ಬಂದು ವೇಣೂರು ಪೇಟೆ ಮೂಲಕ ಮೂಡಬಿದ್ರೆ ಕಡೆಗೆ ಹೋಗುವ ಲಘು ವಾಹನಗಳನ್ನು ಗೋಳಿ ಯಂಗಡಿಯಿಂದ ಪಥ ಬದಲಿಸಿ ನೈನಾಡು, ಬಜಿರೆ, ಆರಂಬೋಡಿ, ಪಡ್ಯಾರಬೆಟ್ಟು ಮೂಲಕ ಮುಖ್ಯರಸ್ತೆಯನ್ನು ಸಂಪರ್ಕಿಸಬೇಕು.

ಮೂಡಬಿದಿರೆಯಿಂದ ಬೆಳ್ತಂಗಡಿ ಹೋಗುವ ಘನ ವಾಹನಗಳನ್ನು ಮೂಡುಬಿದಿರೆ ಶಿರ್ತಾಡಿ, ನಾರಾ, ಅಳದಂಗಡಿ, ಗುರುವಾಯನಕೆರೆ ಮೂಲಕ ಬೆಳ್ತಂಗಡಿ ಕಡೆಗೆ ಹಾಗೂ ಬೆಳ್ತಂಗಡಿಯಿಂದ ಮೂಡುಬಿದಿರೆಗೆ ಹೋಗುವ ಘನ ವಾಹನಗಳನ್ನು ಗುರುವಾಯನಕೆರೆ, ನಾರಾವಿ, ಶಿರ್ತಾಡಿ ಹಾಗೂ ಮೂಡುಬಿದಿರೆ ಮೂಲಕ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಿ ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News