×
Ad

ಜಂಇಯ್ಯತುಲ್ ಫಲಾಹ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಮೀರ್ ಆಗಿ ಮನ್ಸೂರ್ ಅಲಿ ಅಹ್ಮದ್ ಆಯ್ಕೆ

Update: 2024-02-24 19:39 IST

ಮನ್ಸೂರ್ ಅಲಿ ಅಹ್ಮದ್

ಮಂಗಳೂರು: ಜಂಇಯ್ಯತುಲ್ ಫಲಾಹ್ ಸೌದಿ ಅರೇಬಿಯಾದ ರಾಷ್ಟ್ರೀಯ ಸಮಿತಿಯ ವಾರ್ಷಿಕ ಸಭೆಯು ದಮ್ಮಾಮ್ ರೆಡ್ ಪೋಟ್ ರೆಸ್ಟೋರೆಂಟ್ ನಲ್ಲಿ ಶುಕ್ರವಾರ ನಡೆಯಿತು.

ಸಭೆಯಲ್ಲಿ 2024/25 ಸಾಲಿನ ನೂತನ ರಾಷ್ಟ್ರೀಯ ಸಮಿತಿಯ ಪದಗ್ರಹಣ ಕಾರ್ಯಕ್ರಮ ನಡೆಯಿತು‌. ನೂತನ ಅಮೀರ್ ಆಗಿ ಮನ್ಸೂರ್ ಅಲಿ ಅಹ್ಮದ್ ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ಮಾಡಿತು.

ಸಭೆಯ ಅಧ್ಯಕ್ಷತೆಯನ್ನು ಜಂಇಯ್ಯತುಲ್ ಫಲಾಹ್ ದ.ಕ ಹಾಗೂ ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾಗಿರುವ ಕೆ.ಕೆ. ಶಾಹುಲ್ ಹಮೀದ್ ವಹಿಸಿದ್ದರು. ಜಂಇಯ್ಯತುಲ್ ಫಲಾಹ್ ರಾಷ್ಟ್ರೀಯ ಸಮಿತಿಯ ನೂತನ ಅಮೀರ್ ಮನ್ಸೂರ್ ಮತ್ತು ಜಂಇಯ್ಯತುಲ್ ಫಲಾಹ್ ದಮ್ಮಾಮ್ ಘಟಕದ ಅಧ್ಯಕ್ಷ ಶರೀಫ್ ಕಾರ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಂಇಯ್ಯತುಲ್ ಫಲಾಹ್ ದ.ಕ‌ ಹಾಗೂ ಉಡುಪಿ ಜಿಲ್ಲೆಯ ಪ್ರತಿನಿಧಿಗಳು ಸೌದಿ ಅರೇಬಿಯಾದ ವಿವಿಧ ಘಟಕಗಳಾದ ಜಿದ್ದಾ, ದಮ್ಮಾಮ್, ರಿಯಾದ್, ಜುಬೈಲ್ ಇದರ ಪ್ರತಿನಿಧಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News