ಮುಸಾಬಕ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ
Update: 2024-02-24 19:42 IST
ಸುರತ್ಕಲ್: ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮ ಮುಸಬಕದಲ್ಲಿ ಮದರದ ಮ್ಯಾನೇಜ್ ಮೆಂಟ್ ನಿಂದ ರಾಷ್ಟ್ರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಶನಿವಾರ ಸನ್ಮಾನಿಸಲಾಯಿತು.
ರಾಜ್ಯಮಟ್ಟದ ಮುಸಬಕಾದಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ರಫಾಝ್ ಚೊಕ್ಕಬೆಟ್ಟು, ನಿಯಾಝ್ ಚೊಕ್ಕಬೆಟ್ಟು ಇವರನ್ನು ಮುಲ್ಕಿ ಅಂಗಾರಗುಡ್ಡೆ ಜುಮಾ ಮಸೀದಿಯಲ್ಲಿ ಮದರಸ ಮ್ಯಾನೇಜ್ ಮೆಂಟ್ ನ ಕಾರ್ಯಕ್ರಮದಲ್ಲಿ ಮುಖಂಡರು ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ಮದರಸ ಮ್ಯಾನೇಜಮೆಂಟ್ ಅಧ್ಯಕ್ಷರಾದ ಶಿಹಾಬ್ ಚೊಕ್ಕಬೆಟ್ಟು, ಸುರತ್ಕಲ್ ರೇಂಜ್ ಅಧ್ಯಕ್ಷರಾದ ಅಬ್ದುಲ್ಲಾ ದಾರಿಮಿ, ರೇಂಜ್ ಕಾರ್ಯದರ್ಶಿ ಅಬ್ದುಲ್ ರಝಕ್ ಮದನಿ, ಅಂಗಾರಗುಡ್ಡೆ ಬದ್ರಿಯಾ ಜುಮ್ಮಾ ಮಸೀದಿ ಜಮಾತ್ ಕಮಿಟಿಯ ಪದಾಧಿಕಾರಿಗಳು, ಜಂ ಇಯ್ಯತುಲ್ ಮುಅಲ್ಲಿಮೀನ್ ಸುರತ್ಕಲ್ ನ ಪದಾಧಿಕಾರಿಗಳು ಹಾಗೂ ಮದರಸ ಮ್ಯಾನೇಜಮೆಂಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.