×
Ad

ಪಣಂಬೂರು: ಸಮುದ್ರದಲ್ಲಿ ಮುಳುಗಿ ಬಾಲಕ ನಾಪತ್ತೆ

Update: 2024-02-24 20:54 IST

ಸಾಂದರ್ಭಿಕ ಚಿತ್ರ

ಪಣಂಬೂರು: ಇಲ್ಲಿನ ಬೀಚ್‌ಗೆ ಸ್ನಾನಕ್ಕೆಂದು ತೆರಳಿದ್ದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಶನಿವಾರ ಸಂಜೆ ವರದಿಯಾಗಿದೆ.

ಮೂಲತಃ ಬಾಗಲಕೋಟೆಯ ನಿವಾಸಿಯಾಗಿದ್ದು, ಪ್ರಸ್ತುತ ಮೀನಕಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ತುಕರಾಮ (13) ನಾಪತ್ತೆಯಾದ ಬಾಲಕ ಎಂದು ತಿಳಿದು ಬಂದಿದೆ.

ಮೀನಕಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ತುಕರಾಮ ಶನಿವಾರ ಶಾಲೆಯಿಂದ ಮನೆಗೆ ಮರಳಿದ್ದ. ಸಂಜೆಯ ವೇಳೆ ಸ್ನೇಹಿತರೊಡನೆ ಸಮುದ್ರದಲ್ಲಿ ಈಜಾಡಲು ತೆರಳಿದ್ದ ಎನ್ನಲಾಗಿದೆ. ನೀರಿಗೆ ಇಳಿದು ಆಟವಾಡುತ್ತಿದ್ದಾಗ ಅಲೆಗಳ ರಭಸಕ್ಕೆ ಸಿಲುಕಿ ಬಾಲಕ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದು ಜೀವರಕ್ಷಕ ದಳ, ಸ್ಥಳೀಯರು ಧಾವಿಸಿ ಹುಡುಕಾಡಿದರೂ ಬಾಲಕನ ಪತ್ತೆ ಸಾಧ್ಯವಾಗಿಲ್ಲ. ಬಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News