ಮಂಗಳೂರು ವಿವಿ ಕುಲಸಚಿವರಾಗಿ ರಾಜು ಮೋಗವೀರ ಅಧಿಕಾರ ಸ್ವೀಕಾರ
Update: 2024-02-26 17:23 IST
ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಕೆ.ಎ.ಎಸ್(ಆಯ್ಕೆ ಶ್ರೇಣಿ)ಅಧಿಕಾರಿ ಕೆ.ರಾಜು ಮೊಗವೀರ ಅವರು ನೇಮಕಗೊಂಡಿದ್ದು, ಸೋಮವಾರ ಅಧಿಕಾರ ಸ್ಬೀಕರಿಸಿದರು.
ಈ ಸಂದರ್ಭ ಮಂಗಳೂರು ವಿವಿ ಕುಲಪತಿ ಪ್ರೊ.ಜಯರಾಜ್ ಅಮೀನ್, ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ ಅವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಪಂಚಾಯತಿಯಲ್ಲಿ ಉಪಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ(ಆಡಳಿತ)ರಾಗಿ ನೇಮಕಗೊಳಿಸಲಾಗಿದೆ.
ರಾಜು ಮೋಗವೀರ ಅವರು ಕೆಲವು ವರ್ಷದ ಹಿಂದೆ ಮಂಗಳೂರು ವಿವಿಯ ಕುಲಸಚಿವರಾಗಿ ಕಾರ್ಯನಿರ್ವಹಿಸಿ ಬಳಿಕ ಬೇರೆ ಇಲಾಖೆಗೆ ವರ್ಗಾವಣೆಗೊಂಡಿದ್ದರು.