ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯಲ್ಲಿ ‘ಬರ್ಡ್ ಕೌಂಟ್’ ಕಾರ್ಯಕ್ರಮ
ಮಂಗಳೂರು: ನಗರದ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿ ‘ಬರ್ಡ್ ಕೌಂಟ್’ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಕ್ಯಾಂಪಸ್ ಬರ್ಡ್ ಕೌಂಟ್ ಎಂಬುದು ಭಾರತದಾದ್ಯಂತ ಅನೇಕ ಕ್ಯಾಂಪಸ್‌ಗಳಲ್ಲಿ ಪಕ್ಷಿ ಸಂಕುಲವನ್ನು ದಾಖಲಿಸಲು ನಡೆ ಸುವ ಸಂಘಟಿತ ಪ್ರಯತ್ನವಾಗಿದೆ. ಇದು ಇ-ಬರ್ಡ್ ಸಹಯೋಗದೊಂದಿಗೆ ಬರ್ಡ್ ಕೌಂಟ್ ಇಂಡಿಯಾ ಆಯೋಜಿಸಿರುವ ದೊಡ್ಡ ದೊಡ್ಡ ಬ್ಯಾಕ್ ಯಾರ್ಡ್ ಕೌಂಟ್‌ನ ಒಂದು ಭಾಗವಾಗಿದೆ. ಇಲ್ಲಿ ಹಲವಾರು ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಗಳು, ಸರಕಾರಿ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ಕಾರ್ಪೊರೇಟ್ ಕ್ಯಾಂಪಸ್‌ಗಳು ವರ್ಷಂಪ್ರತಿ ಫೆಬ್ರವರಿಯಲ್ಲಿ ದಾಖಲಿಸಲು ಭಾಗವಹಿಸುತ್ತವೆ.
ಸಂತ ಅಲೋಶಿಯಸ್ ಸಂಸ್ಥೆ ಆರು ವರ್ಷಗಳಿಂದ ಈ ಕಾರ್ಯಕ್ರಮ ನಡೆಸುತ್ತಿವೆ. 144 ವರ್ಷಗಳಷ್ಟು ಹಳೆಯದಾದ ಈ ಕಾಲೇಜಿನ 37 ಎಕರೆ ಜಾಗದಲ್ಲಿ ಅಲ್ಲದೆ ಕೋಟೆಕಾರಿ ಬೀರಿಯಲ್ಲಿರುವ 17 ಎಕರೆ ಜಮೀನಿನ ಕ್ಯಾಂಪಸ್‌ನಲ್ಲೂ ಪಕ್ಷಿಗಳ ಎಣಿಕೆಯನ್ನು ಮೂರು ದಿನಗಳ ಕಾಲ ನಡೆಸಲಾಯಿತು.
35 ವಿದ್ಯಾರ್ಥಿಗಳನ್ನು ಒಳಗೊಂಡ ತಂಡಕ್ಕೆ ಸಹಾಯಕ ಪ್ರಾಧ್ಯಾಪಕರಾದ ಗ್ಲಾವಿನ್ ಥಾನಸ್ ರಾಡ್ರಿಗಸ್, ಕಿರಣ್ ಟಿಕೆ, ಡಾ. ಹೇಮಚಂದ್ರ ಮಾರ್ಗದರ್ಶನ ನೀಡಿದ್ದರು. ಪ್ರಾಣಿಶಾಸ್ತ್ರ ವಿಭಾಗದ ಅಧ್ಯಾಪಕ ಹರಿಪ್ರಸಾದ್ ಶೆಟ್ಟಿ, ಸವಿಯಾ ಡಿಸೋಜ, ಮಿಚೆಲ್ ರಾಡ್ರಿಗಸ್ ಎಣಿಕೆ ಕಾರ್ಯ ನಡೆಸಿ 71 ಜಾತಿಗಳ ಆಕರ್ಷಕ ಹಕ್ಕಿಗಳನ್ನು ಗುರುತು ಹಚ್ಚಿದರು.