×
Ad

ಲಾರಿ ಢಿಕ್ಕಿ:ಅಪರಿಚಿತ ವ್ಯಕ್ತಿ ಮೃತ್ಯು

Update: 2024-02-27 21:23 IST

ಮಂಗಳೂರು, ಫೆ.27: ರಾಷ್ಟ್ರೀಯ ಹೆದ್ದಾರಿ 66ರ ಕಣ್ಣೂರು ಹಳೆಯ ಚೆಕ್‌ಪೋಸ್ಟ್ ಬಳಿಯ ಪೆಟ್ರೋಲ್ ಪಂಪ್‌ನ ಮುಂಭಾಗ ಫೆ.24ರ ರಾತ್ರಿ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ.

ಸುಮಾರು 5.7 ಅಡಿ ಎತ್ತರದ, ಗೋಧಿ ಮೈಬಣ್ಣದ ಕಂದು ಬಿಳಿ ಚೌಕುಳಿಯ ಅರ್ಧ ತೋಳಿನ ಅಂಗಿ, ಬಿಳಿ ಬಣ್ಣದ ಲುಂಗಿ ಧರಿಸಿದ್ದರು. ಕಪ್ಪು ಕೂದಲು ಹಾಗೂ ಕುರುಚಲು ಕಪ್ಪು ಗಡ್ಡ ಮತ್ತು ಮೀಸೆ ಹೊಂದಿದ್ದಾರೆ. ತಲೆಯ ಎಡಭಾಗದಲ್ಲಿ ಹಳೆಯ ಗಾಯದ ಗುರುತು ಇದೆ. ವಾರಸುದಾರರು ಇದ್ದರೆ ಮಂಗಳೂರಿನ ಸಂಚಾರ ದಕ್ಷಿಣ ಪೊಲೀಸ್ ಠಾಣೆ (0824-2220850)ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News