ಅಲೋಶಿಯಸ್ ವಿವಿಯಲ್ಲಿ ‘ಮೆಟಾನೊಯಾ’ ರಾಷ್ಟ್ರೀಯ ವಿಚಾರ ಸಂಕಿರಣ
ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ, ಸಮಾಜ ಕಾರ್ಯ ವಿಭಾಗದ ಆಶ್ರಯದಲ್ಲಿ ‘ಮಕ್ಕಳ ಕಳ್ಳಸಾಗಾಣಿಕೆಗೆ ಸಾಮಾಜಿಕ ಕಾರ್ಯ ಪ್ರತಿಕ್ರಿಯೆ’ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಮೆಟಾನೊಯಾ- 2024 ವಿವಿಯ ಮಾಫಿ ಬ್ಲಾಕ್‌ನ ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಡ್ರೀಮ್ ಇಂಡಿಯಾ ನೆಟ್‌ವರ್ಕ್‌ನ ಸಂಸ್ಥಾಪಕ-ನಿರ್ದೇಶಕ-ಮಂಡಳಿ ಸದಸ್ಯ ರೆ.ಫಾ.ಎಡ್ವರ್ಡ್ ಥಾಮಸ್ ಮುಖ್ಯ ಅತಿಥಿಯಾಗಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಅಲೋಶಿಯಸ್ ಪರಿಗಣಿತ ವಿವಿಯ ಉಪಕುಲಪತಿಗಳಾದ ವಂ. ಡಾ.ಪ್ರವೀಣ್ ಮಾರ್ಟಿಸ್‌ಎಸ್.ಜೆ. ಅವರು ಮಾತನಾಡಿ ಬಾಲ್ಯವನ್ನು ಅನುಭವಿಸುವ ಭಾಗ್ಯವಿಲ್ಲದ ಪರಿತ್ಯಕ್ತ ಮಕ್ಕಳನ್ನು ಉತ್ತಮ ಕಾಳಜಿಯಿಂದ ನೋಡಿಕೊಳ್ಳುವಲ್ಲಿ ಮತ್ತು ದೇಶದ ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಎನ್‌ಜಿಒಗಳು ವಹಿಸಿರುವ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ರಿಜಿಸ್ಟ್ರಾರ್ ಡಾ. ಅಲ್ವಿನ್ ಡೆಸಾ , ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಸವಿತಾ ಡಿ ಸೋಜ, ಸಿಬ್ಬಂದಿ ಸಂಚಾಲಕಿ ಕಾವ್ಯ ಎಂ ಮತ್ತು ವಿದ್ಯಾರ್ಥಿ ಸಂಯೋಜಕ ಡಿಕ್ಸನ್ ಎಂ ಜೋಸ್ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಎರಡು ಅಧಿವೇಶನಗಳು ನಡೆದವು. ರೆ.ಫಾ.ಎಡ್ವರ್ಡ್ ಥಾಮಸ್ , ಬೆಂಗಳೂರಿನ ಸಂತ ಜೋಸೆಫ್ ವಿವಿಯ ಪಿಆರ್ ಒ ಪ್ರೊ. ಕಿರಣ್ ಜೀವನ್ ಅವರು ಸಂಪನ್ನೂಲ ವ್ಯಕ್ತಿಯಾಗಿ ‘ಮಕ್ಕಳ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟುವ ಮತ್ತು ಎದುರಿಸುವ ಸಾಮಾಜಿಕ ಕಾರ್ಯತಂತ್ರಗಳು’ವಿಷಯದ ಕುರಿತು ಮಾತನಾಡಿದರು.
ಕೋರಲ್ ಜೀನ್ ರೇಗೊ ಮತ್ತು ವರ್ಷಾ ವರ್ಗೀಸ್ ಕಾರ್ಯಕ್ರಮ ರ್ಯಕ್ರಮ ನಿರೂಪಿಸಿದರು .ಕಾವ್ಯಾಎಂ ಸ್ವಾಗತಿಸಿದರು. ಡಿಕ್ಸನ್‌ಎಂ ಜೋಸ್ ವಂದಿಸಿದರು. ಸಮಾರೋಪ ಸಮಾರಂಭದಲ್ಲಿ ಮಾಫಿಬ್ಲಾಕ್‌ನ ನಿರ್ದೇಶಕಿ ಡಾ. ಲೊವೀನಾ ಲೋಬೊ ಮುಖ್ಯ ಅತಿಥಿಯಾಗಿದ್ದರು. ಆಡಳಿತ ಬ್ಲಾಕ್‌ನ ನಿರ್ದೇಶಕ ಚಾರ್ಲ್ಸ್ ಫುರ್ಟಾಡೊ ಅಧ್ಯಕ್ಷತೆ ವಹಿಸಿದ್ದರು.