ಚಿಕ್ಕಮಗಳೂರು ಮ್ಯಾರಥಾನ್ ನಲ್ಲಿ ನಿಟ್ಟೆ ಶಾಲೆಯ ವಿದ್ಯಾರ್ಥಿಗಳ ಸಾಧನೆ
Update: 2024-02-29 20:47 IST
ಮಂಗಳೂರು: ಚಿಕ್ಕಮಗಳೂರಿನಲ್ಲಿ ಫೆ.25 ರಂದು ನಡೆದ ರಾಜ್ಯ ಮಟ್ಟದ ಚಿಕ್ಕಮಗಳೂರು ಮ್ಯಾರಾಥಾನ್‌ನಲ್ಲಿ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ನಿಟ್ಟೆಯ ಡಾ.ಎನ್.ಎಸ್.ಎ.ಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ರಕ್ಷಿತ್ ಚಿನ್ನದ ಪದಕ ಮತ್ತು ರಷಭ್ ಬೆಳ್ಳಿ ಪದಕ ಪಡೆದಿದ್ದಾರೆ.
ಜೇಶ್ಟಾ ನಾಲ್ಕನೇ ಸ್ಥಾನ ಹಾಗೂ 16 ವರ್ಷದೊಳಗಿನ ವಿಭಾಗದಲ್ಲಿ ದೀಕ್ಷಿತಾ ಚಿನ್ನದ ಪದಕ, ರಶ್ಮಿತಾ ಕಂಚಿನ ಪದಕ ಹಾಗೂ 16 ವರ್ಷ ಮೇಲ್ಪಟ್ಟ ಮುಕ್ತ ವಿಭಾಗದಲ್ಲಿ ಡಾ.ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜಿನ ನಂದಿನಿ ಕಂಚಿನ ಪದಕ ಹಾಗೂ ಡಾ.ಎನ್.ಎಸ್.ಎ.ಎಂ. ಪ್ರಥಮದರ್ಜೆ ಕಾಲೇಜಿನ ಪ್ರತೀಕ್ಷಾ ಐದನೇ ಸ್ಥಾನ ಪಡೆದಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಪ್ರಶಸ್ತಿಯೊಂದಿಗೆ ನಗದು ಬಹುಮಾನ ದೊರೆತಿದೆ ಎಂದು ಪ್ರಕಟನೆ ತಿಳಿಸಿದೆ.