ʼಅಕ್ಸಾʼ ಸಾಹಿತ್ಯ ವೇದಿಕೆಯ ಸಮಿತಿ ರಚನೆ : ಪದಾಧಿಕಾರಿಗಳ ಆಯ್ಕೆ
Update: 2024-05-24 22:39 IST
ಬಂಟ್ವಾಳ : ಅಲ್ ಖಾದಿಸ ಕಾಲೇಜ್ ಆಫ್ ಇಸ್ಲಾಮಿಕ್ ದ'ಅವಾ ಕಾವಳಕಟ್ಟೆ ಇದರ ವಿದ್ಯಾರ್ಥಿ ಸಂಘಟನೆ 'ಅಕ್ಸಾ' ವತಿಯಿಂದ ಸಾಹಿತ್ಯ ಸಮಿತಿಯೊಂದನ್ನು ಸಂಸ್ಥೆಯ ಪ್ರಾಂಶುಪಾಲರಾದ ಬಹು ಎಸ್.ಪಿ ಹಂಝ ಸಖಾಫಿ ಉಸ್ತಾದರ ಮೇಲುಸ್ತುವಾರಿಯಲ್ಲಿ ರಚಿಸಲಾಯಿತು.
ಸಾಹಿತ್ಯ ವೇದಿಕೆಯ ಉಸ್ತುವಾರಿಗಳಾದ ಶುಕ್ರುಲ್ಲಾ ಅಲೀಮಿ ಯವರು ನೂತನ ಸಮಿತಿಯನ್ನು ಘೋಷಣೆ ಮಾಡಿದರು.
ಅಧ್ಯಕ್ಷರಾಗಿ ಮುಹಮ್ಮದ್ ರಿಯಾಝ್ ಕಳಂಜಿಬೈಲ್, ಪ್ರಧಾನ ಕಾರ್ಯದರ್ಶಿಯಾಗಿ ಸೈಯದ್ ರೈಹಾನ್ ಹರಿಹರ, ಕೋಶಾಧಿಕಾರಿಯಾಗಿ ಶಕೀರ್ ಉಜಿರಬೆಟ್ಟು ಅವರನ್ನು ಆಯ್ಕೆ ಮಾಡಲಾಯಿತು. ಕಾಲೇಜಿನ ಕ್ಯಾಂಪಸ್ ನಾಯಕ ಸ್ಥಾನಕ್ಕೆ ರಫೀಕ್ ಕೊಯ್ಯೂರು ಮತ್ತು ಉಪನಾಯಕನಾಗಿ ಉಬೈದುಲ್ಲಾ ಕೆ.ಆರ್ ಪೇಟೆ ಯವರನ್ನು ನೇಮಿಸಲಾಯಿತು.
ನೂತನ ಸಮಿತಿ ಆಯ್ಕೆ ಪ್ರಕ್ರಿಯೆಯಲ್ಲಿ ಸಾಜಿದ್ ಹಿಮಮಿ ಸಖಾಫಿ, ಮುಹ್ಸಿನ್ ಸಖಾಫಿ, ಅಶ್ಫಾಖ್ ಸಖಾಫಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಝಬೀವುಲ್ಲ ಶಾಂತಿಪುರ ಅವರು ಸ್ವಾಗತಿಸಿ, ಫಾರೂಕ್ ಬನ್ನೂರು ವಂದಿಸಿದರು.