×
Ad

ಎರಡು ತಂಡಗಳ ನಡುವೆ ಘರ್ಷಣೆ: ಯುವಕನಿಗೆ ಹಲ್ಲೆ

Update: 2024-05-26 22:51 IST

ಮಂಗಳೂರು,ಮೇ 26: ನಗರದ ಯೆಯ್ಯಡಿ ಬಳಿ ಎರಡು ತಂಡಗಳ ನಡುವೆ ಶನಿವಾರ ತಡರಾತ್ರಿ ನಡೆದ ಘರ್ಷಣೆಯಲ್ಲಿ ಒಬ್ಬರು ಡ್ರಾಗರ್‌ನಿಂದ ಇರಿತಕ್ಕೊಳಗಾಗಿರುವ ಘಟನೆ ವರದಿಯಗಿದೆ.

ಘಟನೆಯಲ್ಲಿ ಗುರುರಾಜ್ ಇರಿತಕ್ಕೊಳಗಾಗಿದ್ದಾರೆ. ಆಶಿಶ್, ಲೈಲ್ ರೆಬೆಲ್ಲೋ, ಡಿಕ್ಸನ್ ಅವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.

ಪ್ರಕರಣದ ವಿವರ: ಗುರುರಾಜ್ ಹಾಗೂ ಆಶಿಶ್ ಅವರು ಉರ್ವ ಮೈದಾನದಲ್ಲಿದ್ದ ಕ್ರಿಕೆಟ್ ಪಂದ್ಯಾಟ ವೀಕ್ಷಿಸಿ ಮನೆಗೆ ಹೋಗುತ್ತಿದ್ದಾಗ ರಾ.ಹೆದ್ದಾರಿ 66ರ ಪದುವ ಕಾಲೇಜ್ ಬಳಿ ನಂತೂರುನಿಂದ ಬಂದ ಕಾರು ಏಕಾಏಕಿ ಬಲಕ್ಕೆ ತಿರುಗಿ ಶರ್ಬತ್ ಕಟ್ಟೆ ಕಡೆಗೆ ಸಂಚರಿಸಿದೆ. ಈ ಸಂದರ್ಭ ಅದರಲ್ಲಿದ್ದ ಆರೋಪಿಯು ಗುರುರಾಜ್ ಕಡೆಗೆ ಅಸಹ್ಯವಾಗಿ ಬೆರಳು ತೋರಿಸಿದ್ದಾನೆ ಎನ್ನಲಾಗಿದೆ.

ಕಾರಿನ ನಂಬರ್ ನೋಡುವ ಸಲುವಾಗಿ ಆಶಿಶ್ ಅವರು ಕೂಡಾ ಕಾರನ್ನು ಎಡಕ್ಕೆ ತಿರುಗಿಸಿ ಶರ್ಬತ್‌ಕಟ್ಟೆ ಕಡೆಗೆ ಚಲಾಯಿಸಿದ್ದಾರೆ. ದೇವಸ್ಥಾನದ ಬಳಿ ಎರಡು ಕಾರುಗಳಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆದಿದೆ. ಗುರುರಾಜ್ ಅವರಿಗೆ ಆರೋಪಿಗಳು ಕಾರನ್ನು ಢಿಕ್ಕಿ ಮಾಡಲು ಯತ್ನಿಸಿದ್ದಾರೆ. ಬಳಿಕ ಎರಡೂ ತಂಡಗಳ ನಡುವೆ ಹೊಡೆದಾಟ ನಡೆದಿದೆ. ಆರೋಪಿಗಳು ಗುರುರಾಜ್ ಅವರ ಹೊಟ್ಟೆಗೆ ಡ್ರಾಗರ್‌ನಿಂದ ಇರಿದು ಗಾಯಗೊಳಿಸಿದ್ದಾರೆ. ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ಎರಡು ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News