×
Ad

ಬಂದರ್‌ನ ಜಲಾಲ್ ಮಸ್ತಾನ್ ಅಲ್ ಬುಖಾರಿ (ಖ.ಸಿ)ರವರ ಆಂಡ್ ನೇರ್ಚೆ ಪ್ರಾರಂಭ

Update: 2024-05-26 22:53 IST

ಮಂಗಳೂರು, ಮೇ 26: ಇತಿಹಾಸ ಪ್ರಸಿದ್ಧ ಮಸ್ಜಿದ್ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ವಠಾರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಚರಿತ್ರೆ ಪ್ರಸಿದ್ಧರಾದ ಶೈಖುನಾ ಅಶ್ಶೈಖ್ ಅಸ್ಸೆಯ್ಯಿದ್ ಮುಹಮ್ಮದ್ ಮೌಲಾ ಜಲಾಲ್ ಮಸ್ತಾನ್ ಅಲ್ ಬುಖಾರಿ (ಖ.ಸಿ)ರವರ 98ನೇ ಆಂಡ್ ನೇರ್ಚೆಗೆ ಚಾಲನೆ ನೀಡಲಾಗಿದೆ.

ಮೇ 25ರಂದು ಮಗ್ರಿಬ್ ನಮಾಝಿನ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್-ಅಝ್ಹರಿ ಉಸ್ತಾದರವರು ಜಲಾಲ್ ಮಸ್ತಾನ್ (ರ)ಮಖಾಂ ಝಿಯಾರತ್‌ನೊಂದಿಗೆ ಧ್ವಜ್ವಾರೋಹಣ ನೆರವೇರಿಸುವ ಮೂಲಕ ಆಂಡ್ ನೇರ್ಚೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಝೀನತ್ ಭಕ್ಷ್ ಕೇಂದ್ರ ಮಸೀದಿ ಖತೀಬ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ, ಅಬ್ದುಲ್ ಹಮೀದ್ ಮುಸ್ಲಿಯಾರ್, ಅಶ್ರಫ್ ದಾರಿಮಿ,ಝೀನತ್ ಭಕ್ಷ್ ಕೇಂದ್ರ ಮಸೀದಿ ಹಾಗೂ ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ಸಮದ್ ಹಾಜಿ, ಅದ್ದು ಹಾಜಿ, ಮುಹಮ್ಮದ್ ಅಶ್ರಫ್ ಹಳೆಮನೆ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News