ಹೊರಗುತ್ತಿಗೆ ಮೀಸಲಾತಿ ಸರಕಾರದ ಘೋಷಣೆ: ಮುಸ್ಲಿಂ ಲೀಗ್ ಸ್ವಾಗತ
Update: 2024-05-27 21:56 IST
ಮಂಗಳೂರು: ಕರ್ನಾಟಕ ರಾಜ್ಯ ಸರಕಾರವು ಹೊರಗುತ್ತಿಗೆಯಲ್ಲಿ ಮೀಸಲಾತಿಯನ್ನು ಘೋಷಿಸಿದ್ದು ಇದನ್ನು ದ.ಕ. ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಧ್ಯಕ್ಷರಾದ ಸಿ. ಅಬ್ದುಲ್ ರಹ್ಮಾನ್ ಸ್ವಾಗತಿಸಿದ್ದಾರೆ.
ಹೊರಗುತ್ತಿಗೆ ಮೀಸಲಾತಿ ಮುಸ್ಲಿಂ ಲೀಗ್‌ನ ಹಲವಾರು ವರ್ಷಗಳ ಬೇಡಿಕೆಯಾಗಿದ್ದು, ರಾಜ್ಯ ಸರಕಾರದ ನಿರ್ಣಯವನ್ನು ಸ್ವಾಗತಿಸುವುದರೊಂದಿಗೆ ಈ ಬಗ್ಗೆ ಸಾರ್ವತ್ರಿಕವಾಗಿ ಅರಿವು ಮೂಡಿಸಲು ರಾಜ್ಯ ಸರಕಾರ ವಕ್ಫ್ ಇಲಾಖೆ ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.