×
Ad

ಎಸ್ಸೆಸ್ಸೆಫ್ ಸಂಪ್ಯ ಯೂನಿಟ್ ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ

Update: 2024-05-27 22:37 IST

ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಪೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಸಂಪ್ಯ ಶಾಖೆಯ ವಾರ್ಷಿಕ ಮಹಾಸಭೆಯು ಮೇ 25 ರಂದು ಎಸ್ಸೆಸ್ಸೆಫ್ ಶಾಖಾ ಕಚೇರಿಯಲ್ಲಿ ನಡೆಯಿತು.

ಅಶ್ರಫ್ ಕಲ್ಲರ್ಪೆ ರವರು ಸಭಾಧ್ಯಕ್ಷತೆ ವಹಿಸಿದ್ದರು, ಎಸ್.ವೈ.ಎಸ್. ಬ್ರಾಂಚ್ ಕಾರ್ಯದರ್ಶಿ ಅಝೀಝ್ ಕಲ್ಲರ್ಪೆ ರವರು ಉದ್ಘಾಟಿಸಿ ಶುಭ ಹಾರೈಸಿದರು. ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡನೆ ಮಾಡಿದ ಬಳಿಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಕಾಮಿಲ್ ಮದನಿ ಸಂಪ್ಯ ಪ್ರಧಾನ ಕಾರ್ಯದರ್ಶಿಯಾಗಿ ಹಮೀದ್ ಅಮ್ಮಿ ಸಂಪ್ಯ, ಕೋಶಾಧಿಕಾರಿಯಾಗಿ ಝುಬೈರ್ ಸಂಪ್ಯ, ದ‌ಅ್‌ವಾ ಕಾರ್ಯದರ್ಶಿಗಳಾಗಿ ಯಾಸೀನ್ ಹಿಮಮಿ ಬಿ.ಕೆ ಹಾಗೂ ನೌಷಾದ್ ಮರಿಕೆ ಕ್ಯಾಂಪಸ್ ಕಾರ್ಯದರ್ಶಿಯಾಗಿ ಸಮ್ಮಾಸ್ ಸಂಪ್ಯ ರೈಂಬೊ ಕಾರ್ಯದರ್ಶಿಯಾಗಿ ಸವಾದ್ ವಾಗ್ಲೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೌಫಲ್ ಅಲಿ ಬಿ.ಕೆ, ಮುಸ್ತಫ ವಾಗ್ಲೆ, ರಹೀಂ ಸಂಪ್ಯ, ಸಹದ್ ಕಲ್ಲರ್ಪೆ, ಮುಹಾಝ್ ಸಂಪ್ಯ, ಮಿಖ್ದಾದ್, ಸಫ್ವಾನ್ ರನ್ನು ಆಯ್ಕೆ ಮಾಡಲಾಯಿತು.

ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಸಮಿತಿಯಿಂದ ಚುನಾವಣೆ ವೀಕ್ಷಕರಾಗಿ ನೌಷಾದ್ ಹಿಮಮಿ ಮರಿಕೆ ರವರು ಭಾಗವಹಿಸಿದ್ದರು. ಅಧ್ಯಕ್ಷ ಕಾಮಿಲ್ ಮದನಿ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಹಮೀದ್ (ಅಮ್ಮಿ) ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News