ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಪರಿಸರ ಸುಸ್ಥಿರತೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
ಮಂಗಳೂರು: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ (ಎಫ್‌ಎಂಎಂಸಿಎಚ್) ವಿಶ್ವಪರಿಸರ ದಿನಾಚರಣೆಯ ಅಂಗವಾಗಿ 10 ದಿನಗಳ ಪರಿಸರ ಸುಸ್ಥಿರತೆ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಸ್‌ಪಿಸಿಬಿ) ,ಎಫ್‌ಎಂಎಂಸಿಎಚ್ , ಮತ್ತು ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (ಕೆಐಸಿಎಲ್ ) ಆಶ್ರಯದಲ್ಲಿ ನಡೆದ ಅಭಿಯಾನದ ಅಂಗವಾಗಿ ಪಣಂಬೂರಿನಲ್ಲಿ ಆರೋಗ್ಯ ಶಿಬಿರದೊಂದಿಗೆ ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆ (ಎಫ್‌ಎಂಎಂಸಿಎಚ್) ಎರಡೂ ಕ್ಯಾಂಪಸ್‌ಗಳಲ್ಲಿ ಸಸಿ ನೆಡಲಾಯಿತು.
ಸಹಾಯಕ ಜನರಲ್ ಮ್ಯಾನೇಜರ್ (ಎಚ್‌ಆರ್ ) ಚೇತನ್ ಕೆ ಶೆಟ್ಟಿ , ಮಾಧುರಿ, ಊಖಂ ಅವರು ಎಫ್‌ಎಂಎಂಸಿಎಚ್ ಪರವಾಗಿ ಬೇವಿನ ಸಸಿಯನ್ನು ಸ್ವೀಕರಿಸಿದರು. ಎಫ್‌ಎಂಸಿಐನಿಂದ ಸಂಪರ್ಕ ಅಧಿಕಾರಿ ಡಾ.ಕೆಲ್ವಿನ್ ಪೈಸ್ ಮತ್ತು ಎಂಜೆಲಾ ಸ್ಟೆಫಿ ಅವರು ಸಸಿ ಹಸ್ತಾಂತರಿಸಿದರು.
ಎಫ್‌ಎಂಎಂಸಿಎಚ್ ಆಡಳಿತಾಧಿಕಾರಿ ಫಾ. ಜಾರ್ಜ್ ಜೀವನ್ ಸಿಕ್ವೇರಾ , ವೈದ್ಯಕೀಯ ಅಧೀಕ್ಷಕರಾದ ಡಾ.ಉದಯ್ ಕುಮಾರ್ ಮತ್ತು ಮುಖ್ಯ ನರ್ಸಿಂಗ್ ಅಧಿಕಾರಿ ಸಿಸ್ಟರ್ ನ್ಯಾನ್ಸಿ ಅವರು ಎಫ್‌ಎಂಸಿಐ ಕ್ಯಾಂಪಸ್‌ನಲ್ಲಿ ಸಸಿ ನೆಟ್ಟರು. ಎಫ್‌ಎಂಎಚ್‌ಪಿಡಿ ಆಡಳಿತಾಧಿಕಾರಿ ಫಾ.ನೆಲ್ಸನ್ ಪೈಸ್ ಮತ್ತು ಸಹಾಯಕ ಆಡಳಿತಾಧಿಕಾರಿ ಅಶ್ವಿನ್ ಕ್ರಾಸ್ತಾ ಉಪಸ್ಥಿತರಿದ್ದರು.
ಎಫ್‌ಎಂಎಂಸಿಯ ಎನ್‌ಎಸ್‌ಎಸ್ ವಿಂಗ್‌ನ ಡಾ.ಪ್ರಸನ್ನ ಭಟ್ ಮತ್ತು ಡಾ.ಥಾಮಸ್ ಕುರುವಿಲ್ಲಾ ನೇತೃತ್ವದ ತಂಡ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಭಾರ ಪರಿಸರ ಅಧಿಕಾರಿ ಡಾ. ಮಹೇಶ್ವರಿ ಸಿಂಗ್ , ನರ್ಸಿಂಗ್ ಕಾಲೇಜಿನ ಕ್ಯಾರೊಲಿನ್ ಸ್ಮಿತಾ , ಎಫ್‌ಎಂಎಂಸಿಎಚ್ ಜನರಲ್ ಮೆಡಿಸಿನ್ ವಿಭಾಗದ ಅಶೋಕ್ ಅಸೋಸಿಯೆಟ್ ಪ್ರೊಫೆಸರ್ ಡಾ.ಸುಪ್ರಿಯಾ ಪಿ.ಎಸ್. ಉಪಸ್ಥಿತರಿದ್ದರು.
ಸುಮಾರು 425 ಫಲಾನುಭವಿಗಳು ಮತ್ತು ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿದ್ದರು. ಮುಂದಿನ ಹತ್ತು ದಿನಗಳಲ್ಲಿ ಎಫ್‌ಎಂಎಂಸಿಎಚ್‌ನಲ್ಲಿ ಪರಿಸರ ಜಾಗೃತಿ ಅಭಿಯಾನ, ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯ ಕ್ರಮಗಳು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.