ರಸ್ತೆಯಲ್ಲಿ ನಮಾಝ್ : ಸ್ವಯಂ ಪ್ರೇರಿತ ಪ್ರಕರಣ ರದ್ದತಿಗೆ ಕೆ.ಎಸ್. ಮಸೂದ್ ಆಗ್ರಹ
ಮಂಗಳೂರು, ಮೇ 29: ನಗರದ ಕಂಕನಾಡಿಯ ಮಸೀದಿ ಬಳಿಯ ರಸ್ತೆಯಲ್ಲಿ ಮೇ 24ರಂದು ನಮಾಝ್ ನಿರ್ವಹಿಸುತ್ತಿ ರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಾರಿ ಚರ್ಚೆಯಾಗುತ್ತಿರುವ ಮಧ್ಯೆಯೇ ಕದ್ರಿ ಪೊಲೀಸರು ಸ್ವಯಂ ಪ್ರೇರಿತ (ಕಲಂ 341,283,143,149) ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ತಿಳಿಸಿರುವ ದ.ಕ.ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಪೊಲೀಸರು ದಾಖಲಿಸಿರುವ ಸ್ವಯಂ ಪ್ರೇರಿತ ಪ್ರಕರಣವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಇಂತಹ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಗರದ ಹಲವು ಕಡೆ ರಸ್ತೆಯ ಮಧ್ಯೆ ಗಂಟೆ ಗಟ್ಟಲೆ ರಸ್ತೆ ತಡೆ ಮಾಡಿ ನಡೆಯುತ್ತಾ ಇರುತ್ತದೆ. ಮಸೀದಿಯಲ್ಲಿ ಜನ ಹೆಚ್ಚಾಗಿ ಸ್ಥಳವಿಲ್ಲದೆ ಇರುವುದರಿಂದ ಮಸೀದಿಯ ಗೇಟಿನ ಬಳಿ ಅನಿವಾರ್ಯವಾಗಿ 5 ನಿಮೀಷ ನಮಾಝ್ ಮಾಡಿದ್ದಕ್ಕೆ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿರುವುದು ಅಕ್ಷಮ್ಯ. ಹಾಗಗಿ ತಕ್ಷಣ ಸ್ವಯಂ ಪ್ರೇರಿತ ಕೇಸನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.