ಸ್ವಯಂ ಪ್ರೇರಿತ ಪ್ರಕರಣ ವಾಪಸ್ ಪಡೆಯಲು ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಮನವಿ
ಮಂಗಳೂರು: ನಗರದ ಕಂಕನಾಡಿಯ ಮಸೀದಿಯ ಬಳಿಯ ರಸ್ತೆಯ ಒಂದು ಬದಿಯಲ್ಲಿ ನಮಾಝ್ ನಿರ್ವಹಿಸಿದವರ ಮೇಲೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದನ್ನು ಕೈ ಬಿಡಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನಿಯೋಗವು ಬುಧವಾರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಮುಖಂಡರು ಘಟನೆಯ ಬಗ್ಗೆ ಗೃಹಸಚಿವರು ಹಾಗೂ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿದ್ದೇವೆ. ಈ ರೀತಿ ಕೇಸು ಹಾಕೋದಿದ್ದರೆ ಮಂಗಳೂರಿನಲ್ಲಿ ದಿನಕ್ಕೆ ಐನೂರು ದೂರು ದಾಖಲಿಸಬೇಕಾಗುತ್ತದೆ. ಪೊಲೀಸರು ವಾಸ್ತವ ಅರಿಯದೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಡಾ.ಕಣಚೂರು ಮೋನು, ಎಂಎಸ್ ಮುಹಮ್ಮದ್, ಮಾಜಿ ಮೇಯರ್ ಕೆ.ಅಶ್ರಫ್, ಕಾರ್ಪೊರೇಟರ್ ಲತೀಫ್ ಕಂದಕ್, ಸಂಶುದ್ದೀನ್ ಕುದ್ರೋಳಿ, ರವೂಫ್, ಮುಖಂಡರಾದ ಮುಸ್ತಫಾ ಪಾವೂರು ಮತ್ತಿತರರು ನಿಯೋಗದಲ್ಲಿದ್ದರು.