ಪುತ್ತೂರು: ಪುರುಷರಕಟ್ಟೆಯಲ್ಲಿ ರಕ್ತದಾನ ಶಿಬಿರ
ಪುತ್ತೂರು: ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಮುಖಂಡ ಪುರುಷರಕಟ್ಟೆಯ ದಿ|ಪ್ರಕಾಶ್ ಪುರುಷರಕಟ್ಟೆ ಹಾಗೂ ಮರ್ಹೂಂ ಹಮೀದ್ ಕೋಡಿ ಶಾಂತಿಗೋಡು ಇವರ ರಕ್ತದಾನ ಶಿಬಿರವು ಸೋಮವಾರ ಪುರುಷರಕಟ್ಟೆ ಜಂಕ್ಷನ್ ನಲ್ಲಿ ನಡೆಯಿತು.
ಟೈ ಬ್ರೇಕರ್ಸ್ (ರಿ) ಪುರುಷರಕಟ್ಟೆ ಹಾಗೂ ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ಇದರ ಜಂಟಿ ಆಶ್ರಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ.) ಸಹಯೋಗದಲ್ಲಿ ರೋಟರಿ ಕ್ಯಾಂಪ್ಕೊ ಪುತ್ತೂರು ಬ್ಲಡ್ ಸೆಂಟರ್ ಸಹಕಾರದೊಂದಿಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸುಮಾರು 60 ಮಂದಿ ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಕಾಶ್ ಅವರ ಸಹೋದರ ಸತೀಶ್, ಸ್ಥಳೀಯ ಕಾಂಗ್ರೆಸ್ ನಾಯಕರಾದ ಮಹಾಲಿಂಗ ನಾಯ್ಕ್, ಯಂಗ್ ಬ್ರಿಗೇಡ್ ರಾಜ್ಯಾಧ್ಯಕ್ಷ ಜುನೈದ್ ಪಿ ಕೆ, ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ಅಧ್ಯಕ್ಷ ಸಿದ್ದೀಕ್ ಗಡಿಪ್ಪಿಲ, ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉಮೇಶ್ ಇಂದಿರಾನಗರ, ನರಿಮೊಗರು ಗ್ರಾಮ ಪಂಚಾಯತ್ ಸದಸ್ಯ ಹೊನ್ನಪ್ಪ ಪೂಜಾರಿ ಕೈಂದಾಡಿ,ಎಸ್ ಡಿ ಪಿ ಐ ನರಿಮೊಗರು ವಲಯ ಅಧ್ಯಕ್ಷ ಸಲೀಂ ಮಾಯಾಂಗಳ,ವೇದನಾಥ್ ಸುವರ್ಣ, ರವೀಂದ್ರ ರೈ ನೆಕ್ಕಿಲು,ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಬಾಬು ಶೆಟ್ಟಿ, ಪರಮೇಶ್ವರ ಭಂಡಾರಿ, ಬೇಬಿ ಜೋನ್, ಶರತ್ ಭಟ್ ಬೈಪಾಡಿತ್ತಾಯ, ಅಲ್ ರಬೀಹ್ ಪ್ರಧಾನ ಕಾರ್ಯದರ್ಶಿ ನಾಸಿರ್ ಪರ್ಪುಂಜ, ಅಲ್ ರಬೀಹ್ ಕೋಶಾಧಿಕಾರಿ ರಿಯಾಝ್ ಶಾಂತಿಗೋಡು, ಸ್ಥಾಪಕ ಆಸೀಫ್ ಪಾಪೆತ್ತಡ್ಕ,ಅಲ್ ರಬೀಹ್ ಸದಸ್ಯರಾದ ಉಸ್ಮಾನ್ ಎ ಕೆ ಪೇರಮುಗೇರು, ಸ್ಥಳೀಯ ಯುವ ನಾಯಕರಾದ ಸಲೀಂ ಪಾಪು ಪುರುಷರಕಟ್ಟೆ,ಟೈ ಬ್ರೇಕರ್ಸ್ ನ ಶಿಹಾಬ್,ಜಮಾಲ್, ಇಲ್ಯಾಸ್ , ಮುಹಾಝ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ 30 ನೇ ಬಾರಿ ರಕ್ತದಾನ ಮಾಡಿದ ಝುಬೈರ್ ಪಿ ಕೆ ಇಂದಿರಾನಗರ ಅವರನ್ನು ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್ ನ ಡಾ|ಸೀತಾರಾಮ್ ಭಟ್ ಸನ್ಮಾನಿಸಿ ಗೌರವಿಸಿದರು. ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಗಲ್ಫ್ ಕಾರ್ಯದರ್ಶಿಯಾಗಿರುವ ರಜಾಕ್ ಸಾಲ್ಮರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.