×
Ad

ಬೋಳಿಯಾರ್ ಘಟನೆಯಲ್ಲಿ ಅಮಾಯಕರ ಬಂಧನ ಆರೋಪ: ಕೊಣಾಜೆ ಪೊಲೀಸ್ ಠಾಣೆಯೆದುರು ಪ್ರತಿಭಟನೆ

Update: 2024-06-25 22:09 IST

ಕೊಣಾಜೆ: ಬೋಳಿಯಾರ್ ಘಟನೆಯ ಹೆಸರಿನಲ್ಲಿ ಮಂಗಳೂರು ನಗರ ಪೊಲೀಸರು ಮತ್ತು ಸರ್ಕಾರ ಮುಸ್ಲಿಂ ಯುವಕರನ್ನು ಬಂಧಿಸುತ್ತಿದೆ ಎಂದು ಆರೋಪಿಸಿ ಎಸ್‌ಡಿಪಿಐ ವತಿಯಿಂದ ಕೊಣಾಜೆ ಠಾಣೆಯೆದುರು ಮಂಗಳವಾರ ಪ್ರತಿಭಟನೆ ನಡೆಯಿತು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಅನ್ವರ್ ಸಾದತ್ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಬೋಳಿಯಾರ್ ಘಟನೆಯ ಹೆಸರಿನಲ್ಲಿ ಪೊಲೀಸರು ಭಯದ ವಾತಾವರಣ ಸೃಷ್ಡಿಸಿ ಮುಸ್ಲಿಂ ಮನೆಗಳಿಗೆ ನುಗ್ಗಿ ಸುಮಾರು ಹದಿನೈದು ಜನರನ್ನು ಬಂಧಿಸಿದ್ದಾರೆ. ಆದರೆ ಘಟನೆ ಕಾರಣಕರ್ತರಾದ ಒಬ್ಬನೇ ಒಬ್ಬ‌ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿಲ್ಲ. ಪೊಲೀಸ್ ಇಲಾಖೆಯು ಸಂಘ ಪರಿವಾರದ ಬೆದರಿಕೆಗೆ‌ ಮಣಿಯದೆ ಕಾನೂನಿನಡಿಯಲ್ಲಿ ಕಾರ್ಯಪ್ರವರ್ತರಾಗಿ ನ್ಯಾಯ ಒದಗಿಸಿಕೊಡ ಬೇಕು ಇಲ್ಲದಿದ್ದರೆ ಮುಂದಿನ ದಿನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

ಅತ್ತಾವುಲ್ಲಾ ಜೋಕಟ್ಟೆ, ರಿಯಾಝ್ ಕಡಂಬು, ಮಿಶ್ರಿಯ ಕಣ್ಣೂರು ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ನವಾಝ್ ಉಳ್ಳಾಲ, ನಸ್ರಿಯಾ ಬೆಳ್ಳಾರೆ, ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ‌ ಬಶೀರ್, ಅಶ್ರಫ್ ಅದ್ದೂರು, ಸುಹೇಲ್ ಖಾನ್, ಅಕ್ಬರ್ ಕುದ್ರೋಳಿ ಮೊದಲಾದವರು ಉಪಸ್ಥಿತರಿದ್ದರು.










Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News