ವಿಟ್ಲ - ಮಂಗಳೂರು ರಸ್ತೆಯಲ್ಲಿ ಕುಸಿತ
Update: 2024-06-26 22:02 IST
ವಿಟ್ಲ : ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ರಸ್ತೆ ಕುಸಿತವಾದ ಘಟನೆ ವಿಟ್ಲ ಸಮೀಪದ ಬೊಬ್ಬೆಕೇರಿಯಲ್ಲಿ ನಡೆದಿದೆ.
ವಿಟ್ಲ-ಮಂಗಳೂರು ರಾಜ್ಯ ಹೆದ್ದಾರಿಯ ವಿಟ್ಲ ಪೇಟೆಗೆ ಸಮೀಪವಿರುವ ಬೊಬ್ಬೆಕೇರಿ ಪರಿಸರದ ಕರ್ನಾಟಕ ಬ್ಯಾಂಕ್ ಮುಂಭಾಗ ವಿಪರೀತ ಮಳೆ ಹಾಗೂ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಇರುವ ಕಾರಣ ರಸ್ತೆಯಲ್ಲೇ ನೀರು ಹರಿದು ರಸ್ತೆಯ ನಡುವೆ ರಸ್ತೆ ಕುಸಿತಗೊಂಡಿದೆ.
ಕಳೆದ ಹಲವಾರು ದಿನಗಳ ಹಿಂದೆ ಇಲ್ಲಿ ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದೇ ನೀರು ರಸ್ತೆಯಲ್ಲಿ ನಿಂತಿದ್ದು, ಇದರಿಂದ ಜನರಿಗೆ ತೊಂದರೆಯಾಗಿತ್ತು. ಇದೀಗ ರಸ್ತೆ ಕುಸಿತ ಉಂಟಾಗಿರುವುದರಿಂದ ದೈನಂದಿನ ವ್ಯವಹಾರಕ್ಕೆ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಇದೀಗ ಸಂಚಾರ ಅಪಾಯದಲ್ಲಿದೆ.