×
Ad

ದೇರಳಕಟ್ಟೆ: ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ವೆಲ್ಲಿಸ್ ರೋಬೋಟಿಕ್ ತಂತ್ರಜ್ಞಾನ ಅಳವಡಿಕೆ

Update: 2024-06-26 22:19 IST

ಕೊಣಾಜೆ; ಮಂಗಳೂರಿನ ದೇರಳಕಟ್ಟೆಯಲ್ಲಿರುವ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಾಗಿರುವ ಜಸ್ಟೀಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ವೆಲ್ಲೀಸ್ ರೋಬೋಟಿಕ್ ಮಂಡಿ( ಮೊಣಕಾಲು) ಬದಲಾವಣೆ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಇದರೊಂದಿಗೆ ನಿಟ್ಟೆ ವಿಶ್ವವಿದ್ಯಾನಿಲಯವು ಭಾರತದಲ್ಲಿಯೇ ಆರ್ಥೊಪೆಡಿಕ್ ಸರ್ಜರಿ ವಿಭಾಗದಲ್ಲಿ ಈ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಪ್ರಥಮ ಆಸ್ಪತ್ರೆಯನ್ನು ಹೊಂದಿರುವ ವಿಶ್ವವಿದ್ಯಾನಿಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಆಧುನಿಕ ತಂತ್ರಜ್ಞಾನವು ಆಸ್ಪತ್ರೆಯ ಸಾಮರ್ಥ್ಯವನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ ಸಮಾಜದ ಎಲ್ಲಾ ಸ್ತರಗಳ ಜನರಿಗೆ ಅತ್ಯಾಧುನಿಕ ಆರೋಗ್ಯ ಸೇವೆಯನ್ನು ಒದಗಿಸುವ ಬದ್ಧತೆಯನ್ನು ಹೊಂದಿರುವುದು ಗಮನಾರ್ಹವಾದುದು. ಎಲ್ಲರ ಕೈಗೆಟಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದೊಂದಿಗೆ ಆರಂಭವಾಗಿರುವ ಕೆ.ಎಸ್.ಹೆಗ್ಡೆ ಆಸ್ಪತ್ರೆಯು ಭಾರತದ ವೈದ್ಯಕೀಯ ಪ್ರಾವೀಣ್ಯತೆಯಲ್ಲಿ ಮುಂಚೂಣಿಯಲ್ಲಿದೆ.ಜಾನ್ಸನ್ ಮತ್ತು ಜಾನ್ಸನ್ ಮೆಡ್‍ಟೆಕ್ ಅಭಿವೃದ್ಧಿಪಡಿಸಿದ ವೆಲ್ಲೀಸ್ ರೊಬೊಟಿಕ್-ಅಸಿಸ್ಟೆಡ್ ಆರ್ಥೊಪೆಡಿಕ್ ಸರ್ಜರಿಯ ನಿಖರತೆಯ ಪರಾಕಾಷ್ಠತೆಯನ್ನು ಪ್ರತಿನಿಧಿಸುತ್ತದೆ. ಈ ಅತ್ಯುನ್ನತ ತಂತ್ರಜ್ಞಾನದ ಅನನ್ಯತೆಯೆಂದರೆ-ಶಸ್ತ್ರಚಿಕಿತ್ಸಕ ವೈದ್ಯರಿಗೆ ಮಂಡಿ ಬದಲಾವಣೆಯ ನಿಖರತೆ ಮತು ದಕ್ಷತೆಯ ಸಹಕಾರ ಹಾಗೂ ರೋಗಿಯ ಫಲಿತ ಸಾಮರ್ಥವನ್ನು ಹೆಚ್ಚಿಸುವಲ್ಲಿ ಹಾಗೂ ಚೇತರಿಕೆಯ ಸಮಯವನ್ನು ಕಡಿಮೆಗೊಳಿಸುವುದು. ಸಾಂಪ್ರದಾಯಿಕ ರೋಬೋಟ್‍ಗಳಿಗಿಂತ ಭಿನ್ನ ರೀತಿಯಲ್ಲಿ, ಶಸ್ತ್ರಚಿಕಿತ್ಸೆಗೆ ಮೊದಲು ಮೊಣಕಾಲಿನ ಪೂರ್ವಭಾವಿ ಸಿ.ಟಿ.ಸ್ಕ್ಯಾನ್‍ಗಳು ಅಗತ್ಯವಿಲ್ಲದುದರಿಂದ ರೋಗಿಗಳು ಅನಗತ್ಯ ವಿಕಿರಣಕ್ಕೆ ಒಳಗಾಗುವು ದನ್ನು ಕಡಿಮೆ ಮಾಡುತ್ತದೆ. ಇದರ ನಿಖರತೆ ಮತ್ತು ನಿಯಂತ್ರಣದಿಂದಾಗಿ ಅಂಗಾಂಶ ಹಾನಿ ಕಡಿಮೆಯಾಗುವುದರಿಂದ ರೋಗಿಗಳಿಗೆ ಆಸ್ಪತ್ರೆಯಲ್ಲಿ ತಂಗುವಿಕೆ ಕಡಿಮೆಯಾಗುವುದು ಮಾತ್ರವಲ್ಲದೆ, ವೇಗವಾಗಿ ಚೇತರಿಕೆಯಾಗುತ್ತದೆ.

ಜಸ್ಟೀಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ವೆಲ್ಲೀಸ್ ರೋಬೋಟಿಕ್ ತಂತ್ರಜ್ಞಾನ ಅಳವಡಿಕೆಯ ಹೆಜ್ಜೆಯು ಆರ್ಥೊಪೆಡಿಕ್ ಸರ್ಜನ್‍ಗಳಿಗೆ ಅತ್ಯಾಧುನಿಕ ಶಸ್ತ್ರ ಚಿಕಿತ್ಸಾ ಉಪಕರಣವನ್ನು ಹಾಗೂ ರೋಗಿಗಳಿಗೆ ಅತ್ಯುತ್ಕೃಷ್ಟ ಮಟ್ಟದ ಸೇವೆಯನ್ನು ಒದಗುವಂತೆ ಮಾಡಿದೆ. ನಿಟ್ಟೆ ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾಗಿರುವ ಈ ಬೋಧನಾ ಆಸ್ಪತ್ರೆಯು ಮುಂದಿನ ತಲೆಮಾರಿನ ಆರ್ಥೊಪೆಡಿಕ್ಸ್ ಸರ್ಜನ್‍ಗಳನ್ನು ತರಬೇತಿಗೊಳಿಸುವ ಬದ್ಧತೆಯನ್ನು ಹೊಂದಿದೆ. ಈ ತಂತ್ರಜ್ಞಾನದ ಬಳಕೆಯಿಂದ ಸ್ನಾತಕೋತ್ತರ ವೈದ್ಯಕೀಯ ಅಭ್ಯಾಸಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ಅನುಭವವನ್ನು ಒದಗಿಸುತ್ತದೆ. ಮೂಳೆ ಶಸ್ತ್ರಚಿಕಿತ್ಸೆಯ ಭವಿಷ್ಯಕ್ಕಾಗಿ ಅವರನ್ನು ತಯಾರು ಗೊಳಿಸುತ್ತದೆ. ಅಲ್ಲದೆ, ಇದರಿಂದ ಉತ್ಪತ್ತಿ ಯಾಗುವ ನಿಖರ ಮತ್ತು ದತ್ತಾಂಶವು ಕ್ಲಿನಿಕಲ್ ಸಂಶೋಧನೆಗೆ ಹೊಸ ದಾರಿ ತೆರೆದು ಮೂಳೆ ಶಸ್ತ್ರ ಚಿಕಿತ್ಸೆಯ ಕ್ಷೇತ್ರವನ್ನು ಮುನ್ನಡೆಸಲು ಮತ್ತು ರೋಗಿಯ ಫಲಿತಾಂಶಗಳನ್ನು ಸುಧಾರಿಸಲು ಇನ್ನಷ್ಟು ಸಹಾಯ ಮಾಡುತ್ತದೆ.ಆಸ್ಪತ್ರೆಯಲ್ಲಿ ವೆಲ್ಲೀಸ್ ರೋಬೋಟಿಕ್ ಮಂಡಿ ಬದಲಾವಣೆ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಭಾಗ ಸಮಾಲೋಚಕರಿಗೆ ಕರೆ ಮಾಡಿ +91 88616 40093 ಸಂಪರ್ಕಿಸಬಹುದು ಎಂದು ನಿಟ್ಟೆ ವಿವಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News