×
Ad

ಕುಕ್ಕೆ ಸುಬ್ರಹ್ಮಣ್ಯ: ವ್ಯಕ್ತಿಯನ್ನು ಎಳೆದು ಹಾಕಿದ ಆನೆ

Update: 2024-06-26 22:25 IST

ಕುಕ್ಕೆ ಸುಬ್ರಹ್ಮಣ್ಯ: ದೇವಸ್ಥಾನದ ಆನೆ ರೂಂ ಬಾಯ್ ಒಬ್ಬರನ್ನು ಎಳೆದು ಹಾಕಿದ ಘಟನೆ ನಡೆದಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಗೆ ಕೆಲವೇ ಸಮಯದ ಮೊದಲು ಈ ಘಟನೆ ನಡೆದಿದೆ. ಸುಬ್ರಹ್ಮಣ್ಯದ ಸವಾರಿ ಮಂಟಪದ ಹತ್ತಿರದ ಬಳಿ ದೇವಸ್ಥಾನದ ಆನೆ ಡಿ.ಕೆ.ಶಿ ಯವರನ್ನು ಸ್ವಾಗತಿಸಲು ಹೋಗುವ ಸಲುವಾಗಿ ನಿಂತಿತ್ತು. ಈ ವೇಳೆ ಒಂದಿಬ್ಬರು ಪೊಲೀಸರು ಕೂಡ ಆನೆಯ ಬಳಿಯಲ್ಲಿ ನಿಂತು ಫೋಟೋ ತೆಗೆಯಲು ಬಂದಿದ್ದರು. ಇದೇ ವೇಳೆಗೆ ಸುಬ್ರಹ್ಮಣ್ಯದ ಲಾಡ್ಜ್ ಒಂದರ ರೂಂ ಬಾಯ್ ಆನೆಯ ಹತ್ತಿರ ಬಂದಿದ್ದು ತಕ್ಷಣ ಆನೆ ತನ್ನ ಸೊಂಡಿಲಿನಿಂದ ಎಳೆದು ಹಾಕಿದೆ. ರೂಂ ಬಾಯ್ ಮದ್ಯಪಾನ ಮಾಡಿರುವುದೇ ಘಟನೆ ಕಾರಣ ಎನ್ನಲಾಗಿದ್ದು ವ್ಯಕ್ತಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News