×
Ad

ಮಂಗಳೂರು: ಕೆವಾ ಬಾಕ್ಸ್ ವಜ್ರದ ಮಳಿಗೆಯಲ್ಲಿ ಚಿನ್ನಾಭರಣ ಪ್ರದರ್ಶನ ಆರಂಭ

Update: 2024-06-27 22:31 IST

ಮಂಗಳೂರು: ನಗರದ ಫಿಝಾ ಬೈ ನೆಕ್ಸಸ್ ಮಾಲ್‌ನಲ್ಲಿ ಕಾರ್ಯಾಚರಿಸುತ್ತಿರುವ ಕೆವಾ ಬಾಕ್ಸ್ ವಜ್ರದ ಮಳಿಗೆಯಲ್ಲಿ Affordable luxury ಲೈಟ್‌ವೈಟ್ ಚಿನ್ನಾಭರಣ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಲಾಗಿದೆ.

ಸಿಲೋಮ್ ಪೂಲ್ಸ್ ಮತ್ತು ವಾಟರ್ ಸೊಲ್ಯೂಷನ್ಸ್ ಇದರ ಸಹ ಸ್ಥಾಪಕ ಹಾಗೂ ಸಿಇಒ ಮರಿಯ ಕ್ಯಾಂಡಿದ್ ಫೆರ್ನಾಂಡಿಸ್ ಹಾಗೂ ಮೈಂಡ್ ಥೆರಪಿ ಮತ್ತು ಸೈಕಾಲಜಿಸ್ಟ್ ತನುಜಾ ಮಾಬಿನ್, ಥೀಮ್ಸ್ ಬ್ಯೂಟಿಕ್ಯು ವಿ ಕೇರ್ ಸ್ಥಾಪಕಿ ರೇಷ್ಮಾ ತೋಟ ಹಾಗೂ ಜೆ ಶ್ರೀಸ್ ಬ್ಯೂಟಿ ಪಾರ್ಲರ್‌ನ ಮಾಲಕಿ ಜಯಶ್ರೀ ಭಂಡಾರಿ, ಮೇಘಾ ಎಂಟರ್‌ರ್ಪ್ರೈಸಸ್ ಆ್ಯಂಡ್ ಮೇಘಾ ಟೂರ್ಸ್ ಆ್ಯಂಡ್ ಟ್ರಾವೆಲ್‌ನ ಮಾಲಕಿ ಪೂರ್ಣಿಮಾ ಶೆಟ್ಟಿ ಈ ಪ್ರದರ್ಶನಕ್ಕೆ ಜಂಟಿಯಾಗಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸಿಟಿ ಗೋಲ್ಡ್ ಆ್ಯಂಂಡ್ ಡೈಮಂಡ್ಸ್‌ನ ಎಜೆಎಮ್ ಅಜ್ಮಲ್, ಬ್ರಾಂಚ್ ಮ್ಯಾನೇಜರ್ ಶಾನಿಫ್ ಮತ್ತಿತರರು ಉಪಸ್ಥಿತರಿದ್ದರು. ನಿಕಿತಾ ಜಾಸ್ಮಿನ್ ಈ ಕಾರ್ಯಕ್ರಮ ನಿರೂಪಿಸಿದರು.

*ಜುಲೈ 15ರವರೆಗೆ ನಡೆಯಲಿರುವ ಪ್ರದರ್ಶನದ ಪ್ರಯುಕ್ತ ಗ್ರಾಹಕರಿಗೆ ವಜ್ರಾಭರಣ ಖರೀದಿಯ ಮೇಲೆ ಶೇ.20 ರಿಯಾಯಿತಿ ದೊರೆಯಲಿದೆ. ಅಲ್ಲದೆ 5000 ರೂ.ನಿಂದ ಚಿನ್ನ ಹಾಗೂ ವಜ್ರಭಾರಣ ದೊರೆಯಲಿದೆ ಎಂದು ಪ್ರಕಟನೆ ತಿಳಿಸಿದೆ.











Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News