×
Ad

ನರಿಂಗಾನ: ನವೀಕೃತ ರಿಫಾಯಿಯ್ಯಾ ಜುಮಾ ಮಸೀದಿ ಉದ್ಘಾಟನೆ

Update: 2024-06-29 22:24 IST

ಕೊಣಾಜೆ: ಯೆನೆಪೊಯ ಪರಿಗಣಿತ ವಿಶ್ವವಿದ್ಯಾನಿಲಯದ ಸಹಕಾರದೊಂದಿಗೆ ನರಿಂಗಾನ ಗ್ರಾಮದ ಅಕ್ಕರೆ ಕೋಡಿಯಲ್ಲಿ ನವೀಕೃತ ರಿಫಾಯಿಯ್ಯಾ ಜುಮಾ ಮಸೀದಿ ಉದ್ಘಾಟನೆಗೊಂಡಿತು.

ಸಯ್ಯದ್ ಅಲೀ ತಂಙಳ್ ಕುಂಬೋಳ್ ದುಅ ನೆರವೇರಿಸಿದರು.

ಯೆನೆಪೊಯ ಪರಿಗಣಿತ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ವೈ.ಅಬ್ದುಲ್ಲ ಕುಂಞಿ ನವೀಕೃತ ರಿಫಾಯಿಯ್ಯಾ ಜುಮಾ ಮಸೀದಿ ಉದ್ಘಾಟಿಸಿದರು. ಬಳಿಕ‌ ಮಾತನಾಡಿದ ಅವರು ಸ್ಥಳೀಯರ ಬೇಡಿಕೆ ಹಾಗೂ ಯೆನೆಪೊಯ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಸೀದಿಯನ್ನು ಜುಮಾ‌ ಮಸೀದಿಯನ್ನಾಗಿ ನವೀಕರಣಗೊಳಿಸಿದ್ದೇವೆ ಎಂದು ಹೇಳಿದರು‌‌.

ಮುಡಿಪು‌ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ‌ ಮಾತನಾಡಿದರು.

ರಿಫಾಯಿಯ್ಯಾ ಜುಮಾ ಮಸೀದಿ ಅಧ್ಯಕ್ಷ ಶರೀಫ್ ಪಲ್ಲಿಬಲಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ‌ಮಸೀದಿ‌ ನಿರ್ಮಾಣಕ್ಕೆ ಸಹಕಾರ ನೀಡಿದವರಿಗೆ ಸನ್ಮಾನಿಸಲಾಯಿತು. ಮಂಜನಾಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಯೆನೆಪೊಯ ಪರಿಗಣಿತ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಫರ್ಹಾದ್ ಯೆನೆಪೊಯ, ಮಂಜನಾಡಿ ಕೇಂದ್ರ ಜುಮಾ‌ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ‌ಬಾವಾ, ನರಿಂಗಾನ ಗ್ರಾ.ಪಂ ಅಧ್ಯಕ್ಷ ನವಾಝ್ ನರಿಂಗಾನ, ಪಜೀರ್ ಗ್ರಾ.ಪಂ ಅಧ್ಯಕ್ಷ ರಫೀಕ್ ಪಜೀರ್, ಎನ್‌.ಎಸ್ ಕರೀಂ ಹಾಜಿ, ಮಂಜನಾಡಿ ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ ಅಲಿ‌ಕುಂಞ ಪಾರೆ, ನರಿಂಗಾನ ಗ್ರಾ.ಪಂ ಸದಸ್ಯರಾದ ಮುರುಳೀದರ್ ಶೆಟ್ಟಿ, ಶೇಕಬ್ಬ ನಿಡ್ಮಾಡ್, ಫಯಾಝ್ ಮೊಂಟೆಪದವು, ಸುಂದರ್ ಪೂಜಾರಿ, ಸ್ಥಳೀಯ ಬಿಜೆಪಿ ಮುಖಂಡ ಪ್ರೆಮಾನಂದ ರೈ, ರಿಫಾಯಿಯ್ಯಾ ಜುಮಾ‌ ಮಸೀದಿ ಉಪಾಧ್ಯಕ್ಷರಾದ ಎಂ.ಎಚ್ ಮೊಹಮ್ಮದ್ ದಾರಿಮಿ, ನರಿಂಗಾನ ಗ್ರಾ.ಪಂ ಮಾಜಿ ಅಧ್ಯಕ್ಷ ಎಂ. ಪಿ ಮೋಹಮ್ಮದ್ ಪಾರೆ, ಹುಸೈನ್ ಬಾವಾ, ಪ್ರ.ಕಾರ್ಯದರ್ಶಿ ಇಬ್ರಾಹಿಂ ಎಂ.ಎಚ್, ಕೋಶಾಧಿಕಾರಿ ಇಸ್ಮಾಯಿಲ್ ಕೋಡಿ, ಉಪಸ್ಥಿತರಿದ್ದರು. ಖತೀಬ್ ಅಬ್ದುಲ್ ಖಾದರ್ ನಹೀಮಿ ಕಾರ್ಯಕ್ರಮ ‌ನಿರೂಪಿಸಿದರು‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News