×
Ad

ಆನ್‌ಲೈನ್ ವಂಚನೆ: ಪ್ರಕರಣ ದಾಖಲು

Update: 2024-07-24 21:46 IST

ಮಂಗಳೂರು: ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ಹೇಳಿ ವ್ಯಕ್ತಿಗೆ 10 ಲ.ರೂ. ವಂಚಿಸಿದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾನು 2023ರ ನವೆಂಬರ್‌ನಲ್ಲಿ ಓಶಿಯನ್ ಫೈನಾನ್ಸ್ ಅಕಾಡಮಿ ಎಂಬ ಕಂಪೆನಿಯ ವೆಬ್‌ಸೈಟ್‌ನಲ್ಲಿ ಕ್ರಿಫ್ಟೋ ಕರೆನ್ಸಿಯ ಬಗ್ಗೆ ಆನ್‌ಲೈನ್‌ನಲ್ಲಿ ತರಬೇತಿ ಪಡೆದಿದ್ದೆ. ಆಗ ಕಂಪೆನಿಯವರು ದೂರುದಾರರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಪಡೆದುಕೊಂಡು ಕ್ರಿಪ್ಟ್ ಕರೆನ್ಸಿಯ ವೆಬ್‌ಸೈಟ್ ಪರಿಚಯಿಸಿದರು. ಅನಂತರ ಅಡ್ಮಿರ್ ಕಾದಿರ್ ಎಂದು ಪರಿಚಯಿಸಿ ಕೊಂಡ ವ್ಯಕ್ತಿ ಆನ್‌ಲೈನ್ ಮೂಲಕ ಸಂದೇಶ ಕಳುಹಿಸಿ ಹಣ ಹೂಡುವಂತೆ ತಿಳಿಸಿದ. ಅದರಂತೆ ತಾನು 12500 ರೂ. ಹೂಡಿಕೆ ಮಾಡಿದ್ದೆ. ಅದರ ಲಾಭಾಂಶವೆಂದು 46000 ರೂ.ವನ್ನು ತನ್ನ ಖಾತೆಗೆ ಕಳುಹಿಸಲಾಗಿತ್ತು. ಅನಂತರ ಆರೋಪಿಗಳು 2024ರ ಮೇ ತಿಂಗಳಲ್ಲಿ ಮೆಸೇಜ್ ಮಾಡಿ ಕ್ರಿಪ್ಟೊ ಕರೆನ್ಸಿಯಲ್ಲಿ ಒಳ್ಳೆಯ ಲಾಭವಿದೆ ಎಂದು ನಂಬಿಸಿ ಕಾಯಿನ್ ಖರೀದಿಸುವಂತೆ ತಿಳಿಸಿದರು. ಮೇ 13ರಂದು ಎರಡು ಕಾಯಿನ್‌ಗಳಿಗೆ ತಲಾ 5 ಲ.ರೂ.ಗಳಂತೆ ಒಟ್ಟು 10 ಲ.ರೂ.ಗಳನ್ನು ವರ್ಗಾಯಿಸಿಕೊಂಡಿದ್ದರು. ಅನಂತರ ಯಾವುದೇ ಹಣ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News