ಮಹಿಳೆ ನಾಪತ್ತೆ
Update: 2024-07-24 21:48 IST
ಮಂಗಳೂರು: ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ರಂಜಿತ್ ಎಂಬವರ ಪತ್ನಿ ಪ್ರಿಯಾ ರಂಜಿತ್ (25) ಎಂಬಾಕೆ ಜು.17ರಿಂದ ಕಾಣೆಯಾಗಿದ್ದಾರೆ.
ಅಂದು ಬೆಳಗ್ಗೆ 7.45ಕ್ಕೆ ತನ್ನ ಮನೆಯಿಂದ ಶ್ರೀನಿವಾಸ ಕಾಲೇಜಿಗೆ ಹೋಗುವುದಾಗಿ ಹೇಳಿದ್ದು, ಸಂಜೆ 5ಕ್ಕೆ ತನ್ನ ಮೊಬೈಲ್‌ಗೆ ತಾನು ಅಮಿತ್‌ನೊಂದಿಗೆ ಹೋಗುತ್ತಿರುವೆ. ತಾಯಿ ಮತ್ತು ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ವಾಟ್ಸ್‌ಅ್ಯಪ್ ಸಂದೇಶ ಕಳುಹಿಸಿ ಬಳಿಕ ಮೊಬೈಲ್ ಸ್ವಿಚ್ಡ್ ಮಾಡಿದ್ದಾರೆ ಎಂದು ರಂಜಿತ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
5.1 ಅಡಿ ಎತ್ತರದ, ಗೋದಿ ಮೈಬಣ್ಣದ, ಮಲಯಾಳಂ ಮತ್ತು ಇಂಗ್ಲಿಷ್ ಮಾತನಾಡಬಲ್ಲ ಮನೆಯಿಂದ ಹೊರಗೆ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಸಿದ್ದಾರೆ. ಎಡಕೈಯಲ್ಲಿ ರಂಜಿತ್ ಎಂಬ ಹೆಸರಿನ ಟ್ಯಾಟೋ ಮತ್ತು ಬಲಕೈಯಲ್ಲಿ ಬಟರ್‌ಫ್ಲೈ ಟ್ಯಾಟೋ ಹಾಕಿಸಿದ್ದಾರೆ. ಈಕೆಯನ್ನು ಕಂಡವರು ದೂ.ಸಂ: ೦೮೨೪-೨೨೨೦೫೧೮ /೨೨೨೦೮೦೦೦ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.