ಸಾಲ ನೀಡುವುದಾಗಿ ದಾಖಲೆ ಪತ್ರಗಳನ್ನು ಪಡೆದುಕೊಂಡು ವಂಚನೆ ಆರೋಪ; ಪ್ರಕರಣ ದಾಖಲು
Update: 2024-07-24 21:53 IST
ಪಣಂಬೂರು: ಸಾಲ ನೀಡುವ ನೆಪದಲ್ಲಿ ಮನೆ ಮತ್ತು ನಿವೇಶನದ ದಾಖಲೆ ಪತ್ರಗಳನ್ನು ಪಡೆದುಕೊಂಡು ಹಣವೂ ನೀಡದೇ, ದಾಖಲೆ ಪತ್ರಗಳನ್ನು ಬೇರೆಯವರಿಗೆ ನೀಡಿ ಅವ್ಯವಹಾರ ನಡೆಸಿರುವ ಕುರಿತು ಮಹಿಳೆಯೊಬ್ಬರು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮೋಸ ಮಾಡಿದ ಆರೋಪಿಗಳನ್ನು ಮುಹಮ್ಮದ್ ನವಾಝ್, ಉಳ್ಳಾಲ ಭವಾನಿ ಕಾಂಪೌಂಡ್ ನಿವಾಸಿ ಅಬ್ದುಲ್ ರಶೀದ್ ಮತ್ತು ಪುತ್ತೂರು ತಾಲೂಕಿನ ಬಜತ್ತೂರು ಶಿವತಮಠ ನಿವಾಸಿ ಪ್ರಕಾಶ್ ಮೋಸ ಮಾಡಿದವರು ಎಂದು ಬೈಕಂಪಾಡಿ ನಿವಾಸಿ ಜಮೀಲಾ ದೂರು ನೀಡಿದ್ದಾರೆ.
ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.