ವಿಟ್ಲ: ಕಾರು ಢಿಕ್ಕಿ; ರಿಕ್ಷಾ ಚಾಲಕ ಮೃತ್ಯು
Update: 2024-07-25 23:26 IST
ವಿಟ್ಲ : ಕಾರು ಮತ್ತು ಆಟೋ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟ ಘಟನೆ ವಿಟ್ಲದ ಉಕ್ಕುಡ ದರ್ಬೆ ಎಂಬಲ್ಲಿ ನಡೆದಿದೆ.
ರಿಕ್ಷಾ ಚಾಲಕ ಪೆರುವಾಯಿ ನಿವಾಸಿ ಅಬ್ಬಾಸ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಮೃತದೇಹವನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇಡಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.