×
Ad

ಸಯ್ಯದ್ ಆಲವಿ ತಂಙಳ್ ನಿಧನ

Update: 2024-07-26 23:30 IST

ಉಳ್ಳಾಲ: ಸಯ್ಯದ್ ಆಲವಿ ತಂಙಳ್ (79) ಅವರು ಕುಸಿದು ಬಿದ್ದು ಮೃತಪಟ್ಟ ಘಟನೆ ಶನಿವಾರ ರಾತ್ರಿ ಬೆಳರಿಂಗೆಯಲ್ಲಿ ನಡೆದಿದೆ.

ಕಿನ್ಯ ಸುನ್ನೀ ಸೆಂಟರ್ ಎಸ್ ವೈ ಎಸ್ ಕಚೇರಿಯಲ್ಲಿ ನಡೆದ ಕೂರ ತಂಙಳ್ ಅನುಸ್ಮರಣೆ ಕಾರ್ಯಕ್ರಮದಲ್ಲಿ ಸಯ್ಯದ್ ಆಲವಿ ತಂಙಳ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ.

ಧಾರ್ಮಿಕ ಗುರುಗಳಾಗಿದ್ದ ಅವರು ಹೊಸನಗರ, ಬಾಳೆಹೊನ್ನೂರು, ಚಿಕ್ಕಮಗಳೂರು ಸಹಿತ ವಿವಿಧೆಡೆ ಖತೀಬ್ ರಾಗಿ ಸೇವೆ ಸಲ್ಲಿಸಿದ್ದರು. ಕಿನ್ಯ ಬುಖಾರಿ ಜುಮಾ ಮಸೀದಿಯ ಗೌರವ ಅಧ್ಯಕ್ಷರಾಗಿದ್ದ ಅವರು, ಕರ್ನಾಟಕ ಮುಸ್ಲಿಂ ಜಮಾಅತ್ ಸಹಿತ ಹಲವು ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News