×
Ad

ಕುಳಾಯಿ ಬಳಿ ನಿರ್ಮಾಣವಾಗುತ್ತಿರುವ ಕಿರು ಜೆಟ್ಟಿ ಕಾಮಗಾರಿ: ಸಚಿವ ಮಂಕಾಳ ವೈದ್ಯ ಭೇಟಿ

Update: 2024-07-27 22:14 IST

ಸುರತ್ಕಲ್:‌ ಸಮೀಪದ ಕುಳಾಯಿ ಬಳಿ ನಿರ್ಮಾಣವಾಗುತ್ತಿರುವ ಕಿರು ಜೆಟ್ಟಿ ಕಾಮಗಾರಿಯನ್ನು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಶಾಸಕ ವೈ. ಭರತ್‌ ಶೆಟ್ಟಿ ಮತ್ತು ಗ್ರಾಮಸ್ಥರು ಜಟ್ಟಿಯ ಅವೈಜ್ಞಾನಿಕ ಕಾಮಗಾರಿ ಮತ್ತು ಜಟ್ಟಿಯನ್ನು ಸದ್ಯ ನಿರ್ಮಿಸಲಾಗಿರುವ ಉತ್ತರದ ಬ್ರೇಕ್ ವಾಟೆರ್‌ನ ಉದ್ದವನ್ನು 831ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್‌ಗೆ ನಿಗದಿಪಡಿಸಿ ಬೇಕು. ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್‌ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981 ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು. ಜಟ್ಟಿಯಲ್ಲಿ ನಾಡ ದೋಣಿಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶದ ವ್ಯವಸ್ಥೆ ನೀಡಿಲ್ಲ. ಜಟ್ಟಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಮಾಡಲಾಗಿಲ್ಲ. ಅದರ ತಳಪಾಯವನ್ನು ಸೂಕ್ತ ರೀತಿಯಲ್ಲಿ ನಿರ್ಮಿಸಿಲ್ಲ. ಬೃಹತ್‌ ಕಲ್ಲುಗಳನ್ನು ಬಳಸುವ ಬದಲು ಸಣ್ಣಪುಟ್ಟ ಕಲ್ಲುಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಈ ಕಾರಣದಿಂದಾಗಿ ಜಟ್ಟಿ ಸಮುದ್ರ ಪಾಲಾಗಿದೆ ಎಂದು ದೂರಿದರು.

ಸ್ಥಳೀಯರ ಆರೋಪವನ್ನು ಗಣನೆಗೆಗೆ ತೆಗೆದುಕೊಂಡ ಸಚಿವರು, ಜಟ್ಟಿ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿರುವ ಎನ್‌ ಎಂ.ಪಿ.ಎ. ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಸ್ಥಳೀಯರು ಆಕ್ಷೇಪ ವ್ಯಕ್ತ ಪಡಿಸಿ ಅವೈಜ್ಞಾನಿಕ ಜಟ್ಟಿಯನ್ನು ತೆರವು ಮಾಡಿ ಸ್ಥಳೀಯ ಮೀನುಗಾರರನ್ನು ಗಣನೆಗೆ ತೆಗೆದುಕೊಂಡು ಕಾಮಗಾರಿ ಮಾಡಕೆಂದು ಆಗ್ರಹಿಸಿದರು.

ಈ ವೇಳೆ ಸಚಿವರು ಸದ್ಯ ಈ ವೆರೆಗ ಆಗಿರುವ ಕಾಮಗಾರಿಯನ್ನು ಇಲ್ಲಿಗೇ ಸ್ಥಗಿತಗೊಳಿಸುವಂತೆ ಸೂಚಿಸಿದರು. ಈ ತಿಂಗಳ ಒಳಗಾಗಿ ಕಾಮಗಾರಿಯ ಯೋಜನೆ ತಯಾರಿಸುವ ಚೆನೈ ಎನ್‌ಐಟಿಕೆಯ ಇಂಜಿನಿಯತ್ ಗಳು, ಎನ್‌.ಎಂ.ಪಿ.ಎ. ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಸ್ಥಳೀಯ ಮೀನಗಾರರನ್ನೊಳಗೊಂಡ ಸಭೆಯನ್ನು ಕರೆದು ಆ ಬಳಿಕ ಮುಂದಿನ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದರು. ಅಲ್ಲದೆ, ಅವೈಜ್ಞಾನಿಕ ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಗೆ ಯಾವುದೇ ಹಣ ನೀಡಬಾರುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭ ಮಂಗಳೂರು ಉತ್ತರ ಶಾಸಕ ಭರತ್‌ ಶೆಟ್ಟಿ, ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪುರುಶೋತ್ತಮ ಚಿತ್ರಾಪುರ, ರವಿ ಶಿಯಾನ್‌ ಹೊಸಬೆಟ್ಟು, ನಾಡದೋಣಿ ಮತ್ತು ಯಾಂತ್ರಿಕ ದೋಣಿಯ ಸಂಘದ ಪಧಾಧಿಕಾರಿಗಳು, ಎನ್‌.ಎಂ.ಪಿ.ಎ. ಅಧಿಕಾರಿಗಳು, ಕಾಂಗ್ರೆಸ್‌ ಮತ್ತು ಬಿಜೆಪಿಯ ಮುಖಂಡರು, ಗ್ರಾಮಸ್ಥರು ಇದ್ದರು.

"ಜಟ್ಟಿ ನಿರ್ಮಾಣಕ್ಕೆ ಸರಕಾರದಲ್ಲಿ ಹಣದ ಕೊರೆತೆಯಿಲ್ಲ. ಕೇಂದ್ರ ಸರಕಾರದ ಶೇ.50, ರಾಜ್ಯ ಸರಕಾರದ ಶೇ.5, ಎನ್‌ಎಂಪಿಎ ಶೇ.45ನ್ನು ನೀಡುತ್ತಿದೆ. ಅನುದಾನದ ಬಗ್ಗೆ ಚಿಂತೆ ಮಾಡುವುದು ಬೇಡ. ಮೀನುಗಾರರಿಗೆ ಅನುಕೂಲಕರ ರೀತಿಯಲ್ಲಿ ಆದಷ್ಟು ಶೀಘ್ರ ಜಟ್ಟಿ ನಿರ್ಮಾಣ ಮಾಡಿ ಕೊಡಲಾಗುವುದು. ಯಾವುದೇ ಬಿಲ್ಲುಗಳನ್ನು ಮಾಡಬಾರದು ಎಂದು ಸಂಬಂಧ ಪಟ್ಟವರಿಗೆ ಸೂಚನೆ ನೀಡಲಾಗಿದೆ. ಪುನಃ ಯೋಜನೆಗಳನ್ನು ತಯಾರಿಸಿ ಸೂಕ್ತ ರೀತಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಮಾಡಲಾಗುವುದು".

-ಮಂಕಾಳ ಎಸ್. ವೈದ್ಯ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News