×
Ad

ವಿಟ್ಲ: ಹುಲಿ ವೇಷ ಹಾಕಲು ಹೋದ ವ್ಯಕ್ತಿ ನಾಪತ್ತೆ

Update: 2024-10-14 22:36 IST

ವಿಟ್ಲ: ಹುಲಿ ವೇಷ ಹಾಕಲು ಇದೆ ಎಂದು ಮನೆಯಲ್ಲಿ ಹೇಳಿ ಹೋದ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ ಕಸಬಾ ಗ್ರಾಮದ ಪಳಿಕೆ ಅಣ್ಣಮೂಲೆ ನಿವಾಸಿ ಸುಂದರ ನಾಯ್ಕ್‌ (55) ನಾಪತ್ತೆಯಾದವರು.

ಸುಂದರ ನಾಯ್ಕ್‌ ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ದಸರಾ ಹಬ್ಬದ ಪ್ರಯುಕ್ತ ವೇಷ ಹಾಕುತ್ತಿದ್ದರು. ಅದೇ ರೀತಿ ಅ.1 ರಂದು ಬೆಳಿಗ್ಗೆ ಮನೆಯಲ್ಲಿ ಇರುವಾಗ ನಾಳೆ ನಾನು ದಸರಾ ಹಬ್ಬದ ವೇಷ ಹಾಕಲು ಇದೆ ನಾನು ವಿಟ್ಲ ಠಾಣೆಗೆ ಹೋಗಿ ಅನುಮತಿ ಪಡೆಯಲು ಇದೆಯೆಂದು ಹೇಳಿದ್ದರು. 

ದಸರಾ ಹಬ್ಬ ಇರುವುದರಿಂದ ಹಬ್ಬದಲ್ಲಿ ವೇಷ ಹಾಕಿ ಹಬ್ಬ ಮುಗಿದ ನಂತರ ಮನೆಗೆ ಬರಬಹುದೆಂದು ಭಾವಿಸಿದ್ದು ಆದರೆ ಈವರೆಗೂ ಗಂಡ ಮನೆಗೆ ಬಾರದೇ ಇರುವುದರಿಂದ ಸಂಬಂಧಿಕರಲ್ಲಿ, ನೆರೆಕರೆಯವರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗದೆ ಕಾಣೆಯಾಗಿದ್ದಾರೆ ಎಂದು ಅವರ ಪತ್ನಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News