×
Ad

ಮಂಗಳೂರು| ಯುವಕನ ಕೊಲೆ ಪ್ರಕರಣ: ಇಬ್ಬರ ವಿರುದ್ಧ ದೂರು ದಾಖಲು

Update: 2024-10-23 22:40 IST

ಮಂಗಳೂರು, ಅ.23: ತನ್ನ ಸಹೋದರನನ್ನು ಆತನ ಪರಿಚಯದ ಇಬ್ಬರು ವ್ಯಕ್ತಿಗಳು ಹಳೆಯ ದ್ವೇಷದಿಂದ ಕೊಲೆಗೈದಿರು ವುದಾಗಿ ಪ್ರಮೀಳಾ ಎಂಬವರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.

ಸಹೋದರ ರಾಜೇಶ್ ಗೌಡ (32) ಅ.14ರಂದು ನಗರದ ಸರ್ವಿಸ್ ಬಸ್ ನಿಲ್ದಾಣದ ಇಂದಿರಾ ಕ್ಯಾಂಟೀನ್ ಬಳಿ ಸಂಶಯಾ ಸ್ಪದವಾಗಿ ಮೃತಪಟ್ಟಿದ್ದರು. ಘಟನೆ ನಡೆದ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ರಾಜೇಶ್ ಗೌಡರಿಗೆ ಕಾರ್ಕಳದ ಆಸೀಫ್ ಮತ್ತು ಇಮ್ರಾನ್ ಎಂಬವರು ಹೊಡೆಯುತ್ತಿರುವುದನ್ನು ಸಾರ್ವಜನಿಕರು ನೋಡಿರುವುದಾಗಿ ತಿಳಿಸಿದ್ದಾರೆ. ಅ.22ರಂದು ತಾನು ಪೊಲೀಸ್ ಠಾಣೆಗೆ ಬಂದಾಗ ರಾಜೇಶ್ ಗೌಡರ ಕಿವಿಗೆ ಆದ ಗಾಯದಿಂದ ಹಾಗೂ ಆತನ ಕುತ್ತಿಗೆ ಯನ್ನು ಹಿಸುಕಿರುವು ದರಿಂದ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಆರೋಪಿಗಳಾದ ಕಾರ್ಕಳದ ಆಸೀಫ್ ಮತ್ತು ಇಮ್ರಾನ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪ್ರಮೀಳಾ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News