×
Ad

ಜೈನ ಮಂದಿರದಿಂದ ಕಳವು: ದೂರು ದಾಖಲು

Update: 2024-10-24 22:57 IST

ಮಂಗಳೂರು, ಅ.24: ನಗರದ ಲೇಡಿಗೋಶನ್ ಆಸ್ಪತ್ರೆ ಹಿಂಬದಿಯಲ್ಲಿರುವ ಗುಜರಾತಿ ಸಮುದಾಯದ ಶ್ವೇತಾಂಬರ ಮೂರ್ತಿ ಪೂಜಕ್ ಜೈನ ಮಂದಿರದಿಂದ 5 ಮೂರ್ತಿಗಳಿಗೆ ಹಾಕಿದ್ದ 55 ಗ್ರಾಮ್ ತೂಕದ 5 ಬಂಗಾರದ ಚೈನುಗಳು ಕಳವಾಗಿರುವ ಬಗ್ಗೆ ಬಂದರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅ.23ರಂದು ಮುಂಜಾವ 4:30ಕ್ಕೆ ಬಂದ ಮಾಹಿತಿಯಂತೆ ಜೈನ ಮಂದಿರಕ್ಕೆ ಹೋಗಲು ಮನೆಯಿಂದ ಹೊರಬಂದಾಗ ಯಾರೋ ರಸ್ತೆ ಬದಿ ಹಣದ ಡಬ್ಬವನ್ನು ಒಡೆಯುವ ಶಬ್ದವನ್ನು ಕೇಳಿತು. ಅಲ್ಲಿಗೆ ಹೋದಾಗ ಹಣದ ಡಬ್ಬವನ್ನು ಬಿಟ್ಟು ಒಬ್ಬ ಓಡಿ ಪರಾರಿಯಾದ. ಬಳಿಕ ಹಣದ ಡಬ್ಬದೊಂದಿಗೆ ಜೈನ ಮಂದಿರಕ್ಕೆ ಹೋಗಿ ನೋಡಿದಾಗ ಬಾಗಿಲಿನ ಚಿಲಕವನ್ನು ಮುರಿದು ಅಂದಾಜು 2,50,000. ರೂ. ಮೌಲ್ಯದ ಚೈನುಗಳು ಕಳವಾಗಿದೆ ಎಂದು ಜೈನ ಮಂದಿರದ ಅರ್ಚಕ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News