×
Ad

ಅಲ್ ಇಕ್ವಾನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಾಗೃತಿ ಕಾರ್ಯಕ್ರಮ

Update: 2024-10-24 23:02 IST

ಪುತ್ತೂರು: ಅಲ್ ಇಕ್ವಾನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂತ ಫಿಲೋಮಿನಾ ಪಿಯು ಕಾಲೇಜು ಸಹಯೋಗ ದೊಂದಿಗೆ ಎಸ್.ಜೆ.ಎಂ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸಂತಫಿಲೋಮಿನಾ ಪಿಯು ಕಾಲೇಜು ಪ್ರಾಂಶುಪಾಲರಾದ ಅಶೋಕ್ ರಯಾನ್ ಕ್ರಸ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇನ್ಫೋರ್ಮೇಟ್ ಫೌಂಡೇಶನ್ ಹಾಗೂ ಅನುಗ್ರಹ ತರಬೇತಿ ಕಾಲೇಜು ಮುಡಿಪು ಇದರ ನಿರ್ದೇಶಕರಾದ ಅಬ್ದುಲ್ ಖಾದರ್ ನಾವೂರು ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ತರಬೇತಿ ನೀಡಿದರು.

ಪುತ್ತೂರು ನಗರ ಸಂಚಾರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂ.ಕೆ ಕುಟ್ಟಿಯವರು ರಸ್ತೆ ಸುರಕ್ಷತೆಯ ಬಗ್ಗೆ ಹಾಗೂ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ತರಬೇತಿ ನೀಡಿದರು.

ವೇದಿಕೆಯಲ್ಲಿ ಅಲ್ ಇಕ್ವಾನ್ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಫ್ರೀದ್ ಹಾಗೂ ಕಾರ್ಯಕ್ರಮದ ನಿರ್ದೇಶಕರು ಹಾಗೂ ಟ್ರಸ್ಟ್ ಸದಸ್ಯರಾದ ಮುಹಮ್ಮದ್ ಫಾಝಿಲ್ ಹಾಗೂ ಜಲಾಲ್ ಮತ್ತು ಚಾರಿಟಿಯ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

ಸಂತ ಫಿಲೋಮಿನಾ ಪಿಯು ಕಾಲೇಜು ಸಿಬ್ಬಂದಿ ಶರತ್ ಆಳ್ವ ಕಾರ್ಯಕ್ರಮ  ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News