×
Ad

ಲೆಟರ್‌ಹೆಡ್, ನಕಲಿ ಸೀಲು ಬಳಸಿ ವಂಚನೆ: ದೂರು ದಾಖಲು

Update: 2024-10-27 22:22 IST

ಮಂಗಳೂರು: ಶಿವಳ್ಳಿ ಸ್ಪಂದನ ಮಂಗಳೂರು ಎಂಬ ಸಂಸ್ಥೆಯ ಹೆಸರಿನಲ್ಲಿ ಸಂಸ್ಥೆಯ ಲೆಟರ್‌ಹೆಡ್ ಮತ್ತು ನಕಲಿ ಸೀಲು ಬಳಸಿ ವಂಚಿಸಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂಘದ ಕಾರ್ಯದರ್ಶಿ ಹೆಸರಿನಲ್ಲಿ ಆರೋಪಿ ಭಾಸ್ಕರ್ ಭಟ್ ಎಂಬಾತ ಲೆಟರ್‌ಹೆಡ್ ಮತ್ತು ಸೀಲ್‌ನ್ನು ನಕಲಿ ಮಾಡಿದ್ದು, ಸಂಘಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನ್ನಲ್ಲಿ ಇರಿಸಿಕೊಂಡಿದ್ದಾನೆ ಎಂದು ಆರೋಪಿಸಿ ಕಾರ್ಯದರ್ಶಿ ಕೃಷ್ಣ ಭಟ್ ಎಂಬವರು ಶನಿವಾರ ಕದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News