×
Ad

ಬಂಗೇರಕಟ್ಟೆ: ಟೈಲರಿಂಗ್ ಸೆಂಟರ್ ಶುಭಾರಂಭ

Update: 2024-11-29 22:31 IST

ಮಡಂತ್ಯಾರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮಂಗಳೂರು ವತಿಯಿಂದ ಬದ್ರಿಯಾ ಜುಮಾ ಮಸೀದಿ, ಬಂಗೇರಕಟ್ಟೆ ಇದರ ಸಹಯೋಗದೊಂದಿಗೆ ನೂರುಲ್ ಹುದಾ ಮದ್ರಸ, ಬಂಗೇರಕಟ್ಟೆ ಇಲ್ಲಿ ವಿನ್ಯಾಸಿ ಟೈಲರಿಂಗ್ ಸೆಂಟರ್ ಶುಭಾರಂಭಗೊಂಡಿತು.

ನಿರುದ್ಯೋಗಿ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಪರಿವರ್ತಿಸುವ ಸಲುವಾಗಿ ತೆರೆಯಲಾದ ಉಚಿತ ಟೈಲರಿಂಗ್ ಸೆಂಟರನ್ನು ಸಾರಾ ಸನಫ್ ಪುಂಜಾಲಕಟ್ಟೆ ಸದಸ್ಯರು ಮಡಂತ್ಯಾರ್ ಗ್ರಾಮ ಪಂಚಾಯತ್ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ನಣ್ಣೀರ ಮುಖ್ಯೋಪಾಧ್ಯಾಯಿನಿ ಅಲ್ ಬಿರ್ರ್‌ ಸ್ಕೂಲ್ ಕರಾಯ, ಸಂಶಾದ್ ಬಾನು ಅಂಗನವಾಡಿ ಟೀಚರ್ ಸಾಲ್ಮರ ಬಂಗೇರಕಟ್ಟೆ, ರೋಹರ ಉಳ್ಳಾಲ ಟೈಲರಿಂಗ್ ಸೆಂಟರ್ ಉಸ್ತುವಾರಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌, ಮುಬೀನ ಟೈಲರಿಂಗ್ ತರಬೇತುದಾರರು ಉಪಸ್ಥಿತರಿದ್ದರು.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಳೆದ ಹಲವು ವರ್ಷಗಳಿಂದ ಮಹಿಳೆಯರಿ ಗಾಗಿ ಕಂಕನಾಡಿ, ಕಣ್ಣೂರು, ನಂದಾವರ, ಕೋಲ್ಪೆ, ಜನತಾ ಕಾಲನಿ, ತೌಡುಗೋಳಿ, ಮಲಾ‌ರ್ ಪಾವೂರು, ಬೋಳಿಯಾರ್, ಅಡ್ಡರು, ಮೂಲರಪಟ್ಟ, ಬೆಳ್ಳರೆಂಜಾಡಿ, ಕಿನ್ಯ, ದೆಮ್ಮಲೆ ಕಲ್ಲಡ್ಕ ಕೆ.ಸಿ.ರೋಡು ಮತ್ತು ಅಮೆಮಾರ್ ಮೊದಲಾದ ಪ್ರದೇಶಗಳಲ್ಲಿ ಉಚಿತ ಟೈಲರಿಂಗ್ ಸೆಂಟರನ್ನು ತೆರೆದು ನೂರಾರು ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿಯನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News