×
Ad

ಮಜ್ಲಿಸ್ ಪಬ್ಲಿಕ್ ಸ್ಕೂಲ್‌ನಲ್ಲಿ ರೊಮೇರೋ ಸ್ಕೂಲ್ ಫೆಸ್ಟ್

Update: 2025-01-03 22:06 IST

ಬಂಟ್ವಾಳ: ಮಜ್ಲಿಸ್ ಪಬ್ಲಿಕ್ ಸ್ಕೂಲ್ ಗಾಣೆಮಾರ್ ಇದರ ವಿದ್ಯಾರ್ಥಿಗಳ ರೊಮೇರ ಫೆಸ್ಟ್ ಕಾರ್ಯಕ್ರಮ ಸಂಸ್ಥೆಯ ಅಧ್ಯಕ್ಷ ಹಾಫಿಝ್ ಅಬ್ದುಲ್ ಮಜೀದ್ ಫಾಲಿಲ್ ಅಲ್ ಹಿಕಮಿಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಯ್ಯಿದ್ ತ್ವಾಹಾ ತಂಙಳ್ ದುಆಗೈದರು.

ಅತಿಥಿಗಳಾಗಿ ರಹೀಮ್ ಸಆದಿ ಕತ್ತಾರ್, ಬದ್ರುದ್ದೀನ್ ಅಝ್ಹರಿ ಕೈಕಂಬ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಆಡಳಿತ ನಿರ್ದೇಶಕ ಮುಹಮ್ಮದ್ ನಝೀರ್, ಡಾ.ಇಮ್ರಾನ್, ಸಂಸ್ಥೆಯ ಮುದರ್ರಿಸ್ ನೌಶಾದ್ ಸಖಾಫಿ, ಮಜೀದ್ ಸಖಾಫಿ ಅಮ್ಮುಂಜೆ ಮತ್ತಿತರರು ಭಾಗವಹಿಸಿದ್ದರು.

ಎಒ ಮುಹಮ್ಮದ್ ಸವಾದ್ ಸ್ವಾಗತಿಸಿದರು. ಮ್ಯಾನೇಜರ್ ಸದ್ದಾಂ ಬದ್ಯಾರ್ ವಂದಿಸಿದರು. ಎಚ್‌ಒಡಿ ಅನಸ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News