×
Ad

ಅಲೋಶಿಯಸ್ ವಿದ್ಯಾರ್ಥಿಯಿಂದ ಕ್ಯಾನ್ಸರ್ ರೋಗಿಗೆ ಬ್ಲಡ್ ಸ್ಟೆಮ್‌ಸೆಲ್ಸ್ ದಾನ

Update: 2025-01-17 17:53 IST

ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ದ್ವಿತೀಯ ಬಿಸಿಎ ವಿದ್ಯಾರ್ಥಿ ಹಾಗೂ ಎನ್‌ಸಿಸಿ ಆರ್ಮಿ ವಿಂಗ್‌ನ ಕೆಡೆಟ್ ಚೆರಿಶ್ ಜಾನ್ ಪಿಂಟೊರವರು ಇತ್ತೀಚೆಗೆ ಬಡ ಕ್ಯಾನ್ಸರ್ ರೋಗಿಗೆ ಬ್ಲಡ್ ಸ್ಟೆಮ್‌ಸೆಲ್ಸ್ ದಾನ ಮಾಡಿದ್ದಾರೆ.

ಬೆಂಗಳೂರಿನಲ್ಲಿರುವ ಡಿಕೆಎಂಎಸ್ ಬಿಎಂಎಸ್‌ಟಿ ಫೌಂಡೇಶನ್ ಇಂಡಿಯಾ - ಎನ್‌ಜಿಒ ಮೂಲಕ ಚೆರಿಶ್ ಜಾನ್ ಈ ದಾನ ಮಾಡಿದ್ದು, 2 ವರ್ಷಗಳ ಹಿಂದೆ ಎಚ್‌ಎಲ್‌ಎ (ಹ್ಯೂಮನ್ ಲ್ಯುಕೋಸೈಟ್ ಆಂಟಿಜೆನ್) ಪರೀಕ್ಷೆಯನ್ನು ಮಾಡುವ ಮೂಲಕ ಅವರು ಈ ದಾನಕ್ಕಾಗಿ ತನ್ನನ್ನು ನೋಂದಾಯಿಸಿಕೊಂಡಿದ್ದರು.

ಕಳೆದ ನವೆಂಬರ್‌ನಲ್ಲಿ ಚೆರಿಶ್‌ರವರ ಬ್ಲಡ್ ಸ್ಟೆಮ್‌ಸೆಲ್ಸ್ ಕ್ಯಾನ್ಸರ್ ರೋಗಿಗೆ ಹೊಂದಿಕೆಯಾಗುತ್ತದೆಂದು ಬಿಎಂಎಸ್‌ಟಿ ಯಿಂದ ಕರೆ ಬಂದಿದ್ದು, ತಂಡವು ಅವರಿಗೆ ಪ್ರಕ್ರಿಯೆಯನ್ನು ವಿವರಿಸಲಾಗಿತು. ತಕ್ಷಣವೇ ಚೆರಿಶ್‌ರವರು ತಮ್ಮ ಕುಟುಂಬ ವೈದ್ಯರು ಮತ್ತು ಕ್ಯಾನ್ಸರ್ ತಜ್ಞರೊಂದಿಗೆ ಸಮಾಲೋಚಿಸಿ ಈ ಕಾರ್ಯಕ್ಕೆ ಒಪ್ಪಿಕೊಂಡರು. ಇದು ಸಾಮಾನ್ಯವಾಗಿ ಒಂದು ಮಿಲಿಯನ್ ಜನರಲ್ಲಿ ಒಬಬರಿಗೆ ಸಿಗುವ ಅವಕಾಶವಾಗಿದೆ. ಡಿಸೆಂಬರ್‌ನಲ್ಲಿ ಚೆರಿಶ್‌ರವರು ಬ್ಲಡ್ ಸ್ಟೆಮ್‌ಸೆಲ್ಸ್ ದಾನ ಮಾಡುವ ಅರ್ಹತೆಯನ್ನು ವೈದ್ಯಕೀಯ ದೃಢೀಕರಣ ಪರೀಕ್ಷೆಯಿಂದ ಪಡೆದಿದ್ದರು. ಇದೀಗ ಬೆಂಗಳೂರಿನಲ್ಲಿರುವ ಡಿಕೆಎಂಎಸ್- ಬಿಎಂಎಸ್‌ಟಿ ಕೇಂದ್ರಕ್ಕೆ ತೆರಳಿ ಪ್ರಕ್ರಿಯೆ ಪೂರ್ಣಗೊಳಿಸಿದಾದರೆ.

ಚೆರಿಶ್ ಜಾನ್ ಪಿಂಟೊ ಮಂಗಳೂರಿನ ಅಶೋಕನಗರದ ರೊನಾಲ್ಡ್ ಪಿಂಟೊ ಮತ್ತು ಜುವಾನಾ ಗ್ರೆಟ್ಟಾ ಕ್ವಾಡ್ರಸ್‌ರವರ ಪುತ್ರ. ವಿದ್ಯಾರ್ಥಿಯ ಈ ಕಾರ್ಯವನ್ನು ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯವು ಶ್ಲಾಘಿಸಿದೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News