ಮಂಗಳೂರು: ಅಕ್ರಮ ಮದ್ಯ ವಶ
Update: 2025-01-18 20:15 IST
ಮಂಗಳೂರು: ನಗರದ ನವಭಾರತ ಸರ್ಕಲ್ ಬಳಿಯ ಕೋಡಿಯಾಲ್‌ಬೈಲ್‌ನಲ್ಲಿರುವ ಎದುರಿನ ರಸ್ತೆಯಲ್ಲಿ ರಾಜ್ಯ ಅಬಕಾರಿ ಕಾಯ್ದೆಯ ವಿರುದ್ಧವಾಗಿ ಯಾವುದೇ ದಾಖಲಾತಿಗಳಿಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ತೆರಿಗೆ ಪಾವತಿ ಸದ ದೇಶಿ 6 ಲೀ. ಮದ್ಯದ ಬಾಟಲಿಗಳನ್ನು ಶುಕ್ರವಾರ ಅಬಕಾರಿ ಇಲಾಖೆ ವಶಪಡಿಸಿದೆ.
ಆರೋಪಿ ದಿನಕರ ಪಾಂಡೇಶ್ವರ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ 83,140 ರೂ.ಆಗಿದೆ ಎಂದು ಪ್ರಕಟನೆ ತಿಳಿಸಿದೆ.